Friday, November 20, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಕಾರ್ಯಕರ್ತರಿಂದ ಕರಾಳ ದಿನ ಆಚರಣೆ

ಬಿಜೆಪಿ ಕಾರ್ಯಕರ್ತರು ಭಾರತ ವಿಭಜನೆಯ ದಿನಗಳನ್ನು ಸ್ಮರಿಸಲು “ವಿಭಜನ್ ವಿಭಿಶಿಕಾ ಸ್ಮೃತಿ ದಿನ”ಆಚರಣೆ ನಡೆಸಿದರು.

ಮಂಡ್ಯ ನಗರದ ಹೊಸಹಳ್ಳಿ ವೃತ್ತದಲ್ಲಿ ಜಮಾವಣೆಗೊಂಡ ನಗರ ಮೋರ್ಚಾ ಬಿಜೆಪಿ ಕಾರ್ಯಕರ್ತರು, ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮೂಲಕ ಮೌನ ಮೆರವಣಿಗೆ ಸಾಗಿದರು.

ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ನಗರಮೋರ್ಚಾ ಅಧ್ಯಕ್ಷ ವಿವೇಕ್ ಅವರು, ಆಗಸ್ಟ್ 14- ಭಾರತ ವಿಭಜನೆ ಸಂದರ್ಭದಲ್ಲಿ ನಮ್ಮ ದೇಶದ ಲಕ್ಷಾಂತರ ಸಹೋದರಿಯರು, ಸಹೋದರರು ಸ್ಥಳಾಂತರಗೊಂಡರು. ಕೆಲವರು ಪ್ರಾಣ ಕಳೆದುಕೊಂಡರು.ಭಾರತ ವಿಭಜನೆಯ ದಿನಗಳನ್ನು ಸ್ಮರಿಸಿ ಇಂದು ದೇಶಾಧ್ಯಂತ “ವಿಭಜನ್ ವಿಭಿಶಿಕಾ ಸ್ಮೃತಿ ದಿನ” ಆಚರಿಸಲಾಗುತ್ತಿದೆ ಎಂದರು.

ದೇಶ ವಿಭಜನೆಯ ನೋವನ್ನು ಮರೆಯಲು ಸಾಧ್ಯವೇ ಇಲ್ಲ. ತಲೆ ಇಲ್ಲದ ದ್ವೇಷ ಹಾಗೂ ದೌರ್ಜನ್ಯದಿಂದ ಲಕ್ಷಾಂತರ ಮಂದಿ ತೊಂದರೆಗೆ ಒಳಗಾದರು. ಇದು ನಮ್ಮ ಜನಗಳ ಹೋರಾಟ ಹಾಗು ತ್ಯಾಗಗಳನ್ನು ನೆನಪಿಸುತ್ತದೆ ಎಂದು ಹೇಳಿದರು.

ಆ ಕಹಿ ನೆನಪುಗಳು ಸಾಮಾಜಿಕ ವಿಭಜನೆಯ ವಿಷ ಹಾಗೂ ಅಸೌಹಾರ್ದತೆ ತೆಗೆಯಲು ನಮಗೆ ಸಹಕರಿಯಾಗಿವೆ. ಏಕತೆಯ ಸ್ಪೂರ್ತಿಯನ್ನು ಬಲಗೊಳಿಸಲು, ಸಾಮಾಜಿಕ ಸೌಹಾರ್ದತೆ ಮತ್ತು ಮನುಷ್ಯತ್ವವನ್ನು ಎತ್ತಿ ಹಿಡಿಯಲು ಮತ್ತಷ್ಟು ಶಕ್ತಿ ನೀಡುತ್ತದೆ ಎಂದು ತಿಳಿಸಿದರು.

ನಾವು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸುತ್ತಿದೇವೆ. ವಿಭಜನೆಯಲ್ಲಿ ಪ್ರಾಣತ್ಯಾಗ ಮಾಡಿದ ಚೇತನಗಳನ್ನು ಮತ್ತು ಹೋರಾಟಗಾರರನ್ನು ಸ್ಮರಿಸಿಕೊಳ್ಳೋಣ.ದುಷ್ಟ ಶಕ್ತಿಗಳಿಂದ ಮುಕ್ತವಾದ ಅಖಂಡ ಭಾರತವನ್ನು ಕಟ್ಟಲು ಸಂಕಲ್ಪಿಸೋಣ. ಮತ್ತೆಂದೂ ಭಾರತ ವಿಭಜನೆಗೊಳ್ಳದಂತೆ ಜಾಗೃತಿ ಮೂಡಿಸೋಣ ಎಂದು ಎಂದರು.

ಪಾದಯಾತ್ರೆಯಲ್ಲಿ ನಗರಸಭಾ ಸದಸ್ಯರಾದ ಶಿವಕುಮಾರ ,ಕೆಂಪಯ್ಯ, ಪ್ರಸನ್ನ, ಬಿಜೆಪಿ ಪದಾಧಿಕಾರಿಗಳಾದ ಹೊಸಹಳ್ಳಿನಾಗೇಶ್, ಶಿವು, ಎಂ.ಬಿ.ರಮೇಶ್, ನಿತ್ಯಾನಂದ, ಶಂಕರ್, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ