Friday, November 20, 2026

ಪ್ರಾಯೋಗಿಕ ಆವೃತ್ತಿ

ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಲಿ : ಮಾದಿಗ ಸಮುದಾಯದ ಒತ್ತಾಯ

ರಾಜ್ಯದಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹಾಗೂ ಕೂಡಲೇ ರಾಜ್ಯಪಾಲರು ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕುವಂತೆ ಒತ್ತಾಯಿಸಿ ಮಂಡ್ಯನಗರದಲ್ಲಿ ಮಾದಿಗ ಸಮುದಾಯದ  ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.

ಮಂಡ್ಯನಗರದ ಸಂಜಯ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೋರಾಟ ಪ್ರತಿಭಟನಕಾರರು ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಎನ್ ಆರ್ ಚಂದ್ರಶೇಖರ್ ಮಾತನಾಡಿ, ಸಂವಿಧಾನದ ಆಶಯದಂತೆ ಪರಿಶಿಷ್ಟರು ಮೀಸಲಾತಿ ಹಂಚಿಕೊಳ್ಳಲು ಒಳಮೀಸಲಾಯಿತಿ ವಿಧೇಯಕ ಮಸೂದೆಗೆ ರಾಜ್ಯಪಾಲರು ಕೂಡಲೇ ಅಂಕಿತ ಹಾಕಬೇಕು. ರಾಜ್ಯ ಸರ್ಕಾರ ಈಗಾಗಲೇ ಆದೇಶ ಮಾಡಿರುವಂತೆ ಜಿಲ್ಲಾ ಆಡಳಿತ ಹಾಗೂ ತಹಶೀಲ್ದಾರಗಳು ಪರಿಶಿಷ್ಟ ಜಾತಿ ಮಾದಿಗ ಜನಾಂಗಕ್ಕೆ ಪ್ರವರ್ಗ-ಎ ಮಾದಿ ಎಂದೇ ಜಾತಿ ದೃಢೀಕರಣ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ನೇರ ನೇಮಕಾತಿಯ ಜೊತೆಗೆ ಬಡ್ತಿ ಹಾಗೂ ಬ್ಯಾಕ್ ಲಾಗ್ KIADB ಹಾಗೂ BDA ಮತ್ತು ಸರ್ಕಾರಿ ಗುತ್ತಿಗೆ ಸೇರಿದಂತೆ ಎಲ್ಲಾ ನೇಮಕಾತಿಯಲ್ಲೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕು. ಎಸ್‌ಸಿಪಿ /ಟಿಎಸ್‌ ಪಿ ಅನುದಾನದಲ್ಲೂ 6:6:5 ಅನುಪಾತದಲ್ಲಿ ಹಂಚಿಕೆಯಾಗ ಬೇಕು ಹಾಗೂ ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು. ಜಿಲ್ಲಾ ಪಂಚಾಯಿತಗಳ ಚುನಾವಣೆಯಲ್ಲೂ ಸಹ ರಾಜಕೀಯ ಒಳಮೀಸಲಾತಿ ಕಲ್ಪಿಸಬೇಕು ಹಾಗೂ ಆದಿಜಾಂಬವ ಅಭಿವೃದ್ಧಿ ನಿಗಮ ಡಾ॥ ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮ. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೆ ತಲಾ 2 ಸಾವಿರ ಕೋಟಿ ಹಣ ನೀಡಬೇಕು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರಾದ ಸಿ ಕೆ ಪಾಪಯ್ಯ, ಮಾದರ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿನ್ ಕಾಂತರಾಜು, ಮುಖಂಡರಾದ, ಬಿ ಕೃಷ್ಣ, ಹೆಚ್ ಎಂ ಪುಟ್ಟರಾಜು, ಜಿ.ಪಂ.ಮಾಜಿ ಅಧ್ಯಕ್ಷ ಕುಮಾರ್, ಚಾಮನಹಳ್ಳಿ ಮಂಜು, ಬಾಳೆಹೊನ್ನಿಗ ಕುಮಾರ್,ಕನ್ನಲಿ ಕೆಂಪಯ್ಯ, ಗೋವಿಂದಯ್ಯ, ಶಂಭುನಹಳ್ಳಿ ರವಿಕುಮಾರ್, ಚಿಕ್ಕಲಿಂಗಯ್ಯ, ಬಿ ಜಿ ಪುರ ಮಂಜು, ಪುಟ್ಟರಾಜು ಕಡಬ, ನರಸಿಂಹಮೂರ್ತಿ ಬಿಂಡಿಗನವಿಲೆ, ರಂಜಿತ್, ಸ್ವಾಮಿ ಎಲೆಚಾಕನಹಳ್ಳಿ, ಚಂದ್ರಶೇಖರ್ ಎಂ ಪಿ, ಹುಲಿವಾನ ಅಂಬುಜಿ, ಬಸರಾಳು ಶ್ರೀನಿವಾಸ, ಹಂಪಾಪುರ ಶಿವಬೋರ, ಪ್ರಸನ್ನ, ಸಿ ಬಿ ಬೋರಯ್ಯ, ರಾಚಯ್ಯ, ಮಲ್ಲೇಶ್, ಚಂದ್ರು, ಸುರೇಶ್, ಉಮೇಶ್ ಹಾಗೂ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ