ಕರ್ನಾಟಕದ ಬಹು ನಿರೀಕ್ಷಿತ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ ಹಾಕಿದ್ದಾರೆ.
ಈ ಹಿಂದೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸಚಿವರ ನಿಯೋಗ ಭೇಟಿಯಾಗಿ ಅಂಕಿತ ಹಾಕುವಂತೆ ಮನವಿ ಮಾಡಿತ್ತು. ಒಳ ಮೀಸಲಾತಿ ಗೊಂದಲದಿಂದ ನೇಮಕಾತಿ ವಿಳಂಬವಾಗುತ್ತಿದೆ ಅಂತ ಮನವರಿಕೆ ಮಾಡಿಕೊಟ್ಟಿತ್ತು. ಆಗ ಅಂಕಿತ ಹಾಕುವುದಾಗಿ ಸಚಿವರ ನಿಯೋಗಕ್ಕೆ ರಾಜ್ಯಪಾಲರು ಭರವಸೆ ನೀಡಿದ್ದರು. ಇದೀಗ ಎಸ್ಸಿ ಒಳ ಮೀಸಲಾತಿ ಮಸೂದೆ ಹಾಕಿರುವ ಮಾಹಿತಿ ನುಡಿ ಕರ್ನಾಟಕ.ಕಾಂ ಗೆ ಲಭ್ಯವಾಗಿದೆ.
ಯಾರಿಗೆ ಎಷ್ಟು ಮೀಸಲಾತಿ?
ಎಡಗೈಗೆ 6%, ಬಲಗೈಗೆ 6%, ಲಂಬಾಣಿ, ಭೋವಿ ಕೊರಚ ಕೊರಮ, ಅಲೆಮಾರಿ ಸೇರಿದಂತೆ ಇತರೆ ಉಪಪಂಗಡಗಳಿಗೆ 5% ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಈ ಹಿಂದೆ ಎಡಗೈಗೆ 6%, ಬಲಗೈಗೆ 5%, ಲಂಬಾಣಿ ಭೋವಿ ಸಮುದಾಯಕ್ಕೆ 4%, ಅಲೆಮಾರಿಗಳಿಗೆ 1%, ಆದಿ ಕರ್ನಾಟಕ, ಅದಿ ದ್ರಾವಿಡ ಸಮುದಾಯಗಳಿಗೆ 1% ಮೀಸಲಾತಿಗೆ ನಾಗಮೋಹನ್ ದಾಸ್ ಆಯೋಗ ಶಿಫಾರಸ್ಸು ಮಾಡಿತ್ತು.




