ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದ ಕಲ್ಲಹಳ್ಳಿ ಬಳಿ ನಡೆದಿದೆ.
ಕಲ್ಲಹಳ್ಳಿಯಲ್ಲಿ ವಾಸವಿದ್ದ ಪ್ರಶಾಂತ್ (28) ಎಂಬಾತನೇ ಅಪಘಾತದಲ್ಲಿ ಮೃತಪಟ್ಟ ಯುವಕ.ಮಂಡ್ಯ ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ವಾಸವಿದ್ದ ಪ್ರಶಾಂತ್ ಗಾರೆ ಕೆಲಸ ಮಾಡುತ್ತಿದ್ದ.

ಇಂದು ಬೆಳಿಗ್ಗೆ ಕೆಲಸಕ್ಕೆಂದು ಬೆಂಗಳೂರು-ಮೈಸೂರು ಹೆದ್ದಾರಿಯ ಕಲ್ಲಹಳ್ಳಿ ಸರ್ಕಾರಿ ಶಾಲೆಯ ಮುಂಭಾಗ ತನ್ನ ಬೈಕ್(KA-04 04 2755)ನಲ್ಲಿ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ ಮೈಸೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ(TN 33 BH 9299) ಪ್ರಶಾಂತ್ ಬೈಕಿಗೆ ಗುದ್ದಿದೆ.ಲಾರಿ ಗುದ್ದಿದ ರಭಸಕ್ಕೆ ಪ್ರಶಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಪೋಲಿಸರು ಬಂದ ಭೇಟಿ ನೋಟ್ ಮಾಹಿತಿ ಮಾಹಿತಿ ಇದೆ ಎಂದು ಕರೆಯಲ್ಪಡುವ ಮಾಹಿತಿ ಇದೆ ಎಂದು




