ಸೆಪ್ಟೆಂಬರ್ 7 ಬುಧವಾರದಂದು ಕನ್ಯಾಕುಮಾರಿಯ ಗಾಂಧಿ ಮಂಟಪದಿಂದ ‘ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಇಂದು ಪ್ರತಿಯೊಂದು ಸಂಸ್ಥೆಯು ಬಿಜೆಪಿ- ಆರ್ ಎಸ್ ಎಸ್ ದಾಳಿಗೆ ಒಳಗಾಗುತ್ತಿದೆ” ಎಂದು ಹೇಳಿದರು.
ಭಾರತವನ್ನು ಧಾರ್ಮಿಕ ನೆಲೆಯಲ್ಲಿ ಮತ್ತು ಭಾಷೆಗಳಲ್ಲಿ ವಿಭಜಿಸಬಹುದು ಎಂದು ಬಿಜೆಪಿ- ಆರ್ ಎಸ್ ಎಸ್ ನವರು ಭಾವಿಸುತ್ತಾರೆ. ಆದರೆ ಈ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ, ಈ ದೇಶವು ಯಾವಾಗಲೂ ಒಗ್ಗೂಡಿರುತ್ತದೆ” ಎಂದು ಮೊದಲ ದಿನದ ಭಾರತ್ ಜೋಡೋ ಯಾತ್ರೆಯ ದಿನದಂದು ಹೇಳಿದರು.
ಭಾರತವು ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಇದುವರೆಗೆ ಅತ್ಯಧಿಕ ನಿರುದ್ಯೋಗ ದರವನ್ನು ಎದುರಿಸುತ್ತಿದೆ, ಇಂದು ದೇಶವು ದುರಂತದತ್ತ ಸಾಗುತ್ತಿದೆ ಎಂದು ಹೇಳಿದರು.
ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ಉದ್ಘಾಟನಾ ಸಂದರ್ಭದಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಉಪಸ್ಥಿತರಿದ್ದರು.
ಭಾರತ್ ಜೋಡೋ ಯಾತ್ರೆಯ ಆರಂಭದ ಸಾಂಕೇತಿಕ ಸೂಚಕವಾಗಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಷ್ಟ್ರಧ್ವಜವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸಿದರು ಮತ್ತು ಉಭಯ ನಾಯಕರು ತ್ರಿವರ್ಣ ಧ್ವಜಕ್ಕೆ ವಂದಿಸಿದರು.
3,500 ಕಿಮೀ ಉದ್ದದ ಯಾತ್ರೆಯು 150 ದಿನಗಳಲ್ಲಿ ತಮಿಳುನಾಡಿನಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 12 ರಾಜ್ಯಗಳನ್ನು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ತಲುಪುಲಿದೆ.




