Friday, September 20, 2024

ಪ್ರಾಯೋಗಿಕ ಆವೃತ್ತಿ

ಮಾನ್ಸೂನ್ ರಾಗ ನಾಳೆ ಬೆಳ್ಳಿ ತೆರೆಗೆ

ಡಾಲಿ ಧನಂಜಯ್ ಹಾಗು ರಚಿತರಾಮ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮಾನ್ಸೂನ್ ರಾಗ ನಾಳೆ ಬೆಳ್ಳಿ ತೆರೆಗೆ ಬರಲು ಸಿದ್ಧವಾಗಿದೆ.

ಸಿನಿಮಾದ ಟ್ರೈಲರ್ ಹಾಗು ಹಾಡುಗಳು ವಿಕ್ಯಾತ್ ಸ್ಟುಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈಗಾಗಲೇ ರಿಲೀಸ್ ಆಗಿದ್ದು ಸಕ್ಕತ್ ಸದ್ದುಮಾಡುತ್ತಿವೆ ಜೊತೆಗೆ ಅದ್ದೂರಿಯಾಗಿ ಪ್ರೀರಿಲೀಸ್ ಕೂಡ ಮಾಡಿದೆ ಚಿತ್ರತಂಡ.

ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎ,ಆರ್ ವಿಖ್ಯಾತ ಅವರು ನಿರ್ಮಿಸುತ್ತಿರು ಚಿತ್ರಕ್ಕೆ ಎರ್ ರವೀಂದ್ರನಾಥ್ ರವರ ನಿರ್ದೇಶನವಿದ್ದು ಅನೂಪ್ ಸೀಳಿನ್ ರ ಮ್ಯೂಸಿಕ್ ಇದೆ.

ಅದಷ್ಟೆ ಅಲ್ಲದೆ ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೆ ಇದ್ದು ನಾಯಕ ನಟನಾಗಿ ಡಾಲಿ ಧನಂಜಯ,ನಾಯಕ ನಟಿಯಾಗಿ ರಜಿತರಾಮ್ ನಟಿಸುತ್ತಿದ್ದು ಪ್ರಮುಕ ಪಾತ್ರದಲ್ಲಿ ಯಶಾ ಶಿವಕುಮಾರ್ ಹಾಗೆಯೇ ಹಿರಿಯ ಕಲಾವಿದರಾದ ಸುಹಾಸಿನಿ ಮಣಿರತ್ನಮ್ ಮತ್ತುಅಚ್ಯುತ್ ಕುಮಾರ್ ಬಣ್ಣ ಹಚ್ಚಿದ್ದಾರೆ.

ಇಂದು ಸಂಜೆ 7:30ಕ್ಕೆ ಪಿ,ವಿ,ಆರ್ ಒರಿಯನ್ ಮಾಲ್ ನಲ್ಲಿ ಮಾನ್ಸೂನ್ ರಾಗದ ಪ್ರೀಮಿಯರ್ ಶೋ ಏರ್ಪಡಿಸಿದ್ದು ಈಗಾಗಲೇ ಟಿಕೇಟ್ ಗಳು ಸೋಲ್ಡ್ ಔಟ್ ಆಗಿವೆ

ಮೊದಲ ದಿನದ ಖುಷಿಯಲ್ಲೇ ಮಾನ್ಸೂನ್ ರಾಗ ಚಿತ್ರಕ್ಕೆ ನಿರೀಕ್ಷೆಗಳು ಹೆಚ್ಚಾಗಿದ್ದು ಪ್ರೇಕ್ಷಕ ಮಹಾಪ್ರಭು ಚಿತ್ರವನ್ನು ಅಪ್ಪಿಕೊಂಡು ಮತ್ತೊಮ್ಮೆ ಡಾಲಿ ಧನಂಜಯ್ ರನ್ನು ಗೆಲುವಿನ ಕಡಲಲ್ಲಿ ತೇಲಿಸುತ್ತಾರೆ ಎಂದು ಕಾದು ನೋಡಬೇಕಿದೆ.

Related Articles

1 COMMENT

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!