Thursday, November 19, 2026

ಪ್ರಾಯೋಗಿಕ ಆವೃತ್ತಿ

ರಾಜಕಾರಣಿಗಳಿಗೊಂದು ಮಾತು

ನಾವಿದನ್ನು ಮಾತಾಡುತ್ತೇವೆ.!
ನಾಗರೀಕತೆಯು ಶಾಂತಿ, ಪ್ರೀತಿ, ನೆಮ್ಮದಿಯನ್ನು ಹೆಚ್ಚಿಸಬೇಕು.

ದೇಶದ ಜನರ ನಡುವೆ ದ್ವೇಶ ಬಿತ್ತಿ ಜನರ ಹಸಿವು,
ಬಡತನಗಳ ಮರೆಸಲು ನಿಮಗೆ ಅಧಿಕಾರ ಕೊಟ್ಟಿಲ್ಲ.
ಭ್ರಾತೃ ಭಾವನೆಯ ತುಂಬಿ, ಹಸಿದವರಿಗೆ
ಹಂಚಿಕೊಂಡು ತಿನ್ನುವ ಧರ್ಮವಿದ್ದರೆ ಹೇಳಿಕೊಡಿ.

ಶ್ರೀಮಂತರ ಕೋಟಿಯ ಕಿಸೆಯಿಂದ
ಹಸಿದ ಮಗುವಿಗೆ ಮೂವತ್ತು ರೂಪಾಯಿ ಕೊಡಿಸಿ
ಅದನೆ ರಾಮರಾಜ್ಯವೆನ್ನೋಣ.

ಓದು ಮುಗಿದು ಯಾಕಾದರೂ ಓದಿದೆನೋ ಎಂದು
ತಲೆಮೇಲೆ ಕೈಹೊತ್ತ ಯುವಕನಿಗೊಂದು
ಕೆಲಸ ಕೊಡಿ ಅಂದೇ ಅವನು ಅಚ್ಚೇದಿನವನ್ನ ಸಂಭ್ರಮಿಸಲಿ..

ಗುಡಿ, ಚರ್ಚು, ಮಸೀದಿ, ಮಠಗಳಿಗೇನು ಕಷ್ಟ?
ಅವರ ಬಳಿ ಕಾರುಗಳಿವೆ, ಬಿಳಿಬಟ್ಟೆಯಲಿ
ವೃಷ್ಟಾನ್ನ ಬಡಿಸಲು ಆಳುಗಳೂ ಇದ್ದಾರೆ.
ನಮಗೆ ದುಡಿಮೆಯೇ ಧರ್ಮ! ಬೆವರೇ ದೇವರು!
ಅನ್ನದ ಮೇಲೇ ನಮ್ಮ ಭಕ್ತಿ!!

ಬನ್ನಿ ನಮ್ಮ ನೋಡಿ, ನಮ್ಮ ಕಷ್ಟ ಕೇಳಿ ಸಾಕು!
ಅದನಿನ್ನೂ ಕಾಯುತ್ತಿದ್ದೇವೆ!
ನಮ್ಮ ದೇವರ ಯಾರೋ ಕೆಣಕಿದ್ದಾನೆ,
ಅವನಿಗೆ ಹೊಡೆಯಿರಿ ಎಂದರೆ ಹೊಡೆದೇಬಿಡುತ್ತೇವೆ.
ಅಮೇಲೆ ಮರುಗುತ್ತೇವೆ. ಅವ ನಮ್ಮ ಸಹಜೀವಿಯೇ ಆಗಿದ್ದ,
ನಮ್ಮಂತೆಯೇ ಬದುಕುವ ಆಸೆ ಹೊತ್ತಿದ್ದ!.

ನಮ್ಮ ಹೊಡೆದಾಡಿಸಬೇಡಿ,
ನಾವು ಕಲಿಯಬೇಕು, ನಾವು ಎಲ್ಲರ ಸೇರಿ ನಲಿಯಬೇಕು
ನಮಗೆ ಶಿಕ್ಷಣ ಕೊಡಿ, ಕೆಲಸ ಕೊಡಿ, ಪ್ರೀತಿಸಲು ಬಿಡಿ

ನೀವು ನಮ್ಮ ಸೇವಕರು ಎನ್ನುತ್ತೀರಿ.
ನಾವು ನಿಮ್ಮನ್ನೇ ಬೇಡುವ ಸ್ಥಿತಿಗೆ ತಂದಿದ್ದೀರಿ!
ಇರಲಿ ನಮ್ಮ ಕೊನೆಯ ಕೋರಿಕೆಗಳನಾದರೂ ಕೇಳಿ,
ನಮ್ಮನ್ನು ಪ್ರೀತಿಸಲು ಬಿಡಿ

✍🏿 ಪ್ರದೀಪ್ ಮುಮ್ಮಡಿ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ