ವಿಸ್ಮಯ ಬುಕ್ ಹೌಸ್, ಮೈಸೂರು ಮತ್ತು ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾ ಘಟಕ ಮಂಡ್ಯ ಇವರ ವತಿಯಿಂದ ಮಂಡ್ಯದ ಮಾಂಡವ್ಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ರಚಿಸಿರುವ ಸುಮಾರು 250 ಪುಟಗಳ “ಮರೆಯಲಾಗದ...
ಗೌರಿ.....
ಇಂದು ಸೆಪ್ಟೆಂಬರ್ 5.. ನಮ್ಮ ಗೌರಿ ಹುತಾತ್ಮಳಾಗಿ 6 ವರ್ಷಗಳು ..
ಬಹಿರಂಗದಲ್ಲಿ ಬೆಂದು ಅಂತರಂಗದಲ್ಲಿ ಶುದ್ಧವಾದ
ಆ ಬಯಲು ಆಲಯವನ್ನು ನೆನೆಯುತ್ತಾ ..
ಆ ಗೌರಿಯನ್ನು...
ಆ ಭರವಸೆಯನ್ನು ,
*ಆ ಸಾಧ್ಯತೆಯನ್ನು
ಬೆಂಕಿಯಲ್ಲಿ ಬೇಯುತ್ತಲೇ
ಬೆಳಕು ನೀಡಿದ ಬಗೆಯನ್ನು ..
ಬೆಂದು...
ಒಂದು ಸಾವನ್ನು ಯಾಕೆ ನೆನಪಿಡಬೇಕು?
ಯಾಕೆಂದರೆ ಅದು ಸಹಜ ಸಾವಾಗಿರಲಿಲ್ಲ.
ಅದು ಉಸಿರು ನಿಲ್ಲಿಸುವ ಸಂಚಾಗಿತ್ತು,
ಅದು ಚಿಂತನೆಯ ಬೆದರಿಸುವುದಾಗಿತ್ತು.
ಹಂಚಿಕಡ್ಡಿಯಂಥಾ ದೇಹದೊಳಗಿನ
ದೈತ್ಯ ಚೈತನ್ಯಕ್ಕೆ ಬೆದರಿದವರ ಹೇಡಿ ಕೃತ್ಯವಾಗಿತ್ತು
ಉಳಿದವರ ಬೆದರಿಸುವ ತಂತ್ರವೂ ಆಗಿತ್ತು
ಎಷ್ಟೋ ದನಿಗಳು,
ಈ ಹರಿದ ನೆತ್ತರ
ಓಕುಳಿಗೆ
ಒಣಗಿ ಹೋಗಿರಬಹುದು.
ಆದರೆ...
ಮುಷ್ಠಿ
ಆ ನೆನಪಿನ್ನು ಹಸಿ ಹಸಿ
ಒಮ್ಮೆ ಅಣ್ಣನ ತೊಡೆಯ
ಮೇಲೆ ಕೂತು ಈ ಪ್ರೆಶ್ನೆ ಕೇಳಿದ್ದೆ
"ಅಣ್ಣ, ಸಾಯುವುದೆಂದರೇನು?"
ಕಸಿವಿಸಿಗೊಂಡ ಅಣ್ಣ ಕ್ಷಣಕಾಲ ಯೋಚಿಸಿದ್ದರು
ಇಂತಹ ಜಟಿಲ ಪ್ರೆಶ್ನೆಗೆ ಸರಳವಾಗಿ ಉತ್ತರಿಸುವುದಾದರು ಹೇಗೆ?
ಮುಗ್ದ ಮೂರ್ಖ ಮಗನಿಗೆ
ತತ್ವ ಥಿಯರಿಗಳು ಅರ್ಥವಾಗದು.
ಸರಳವಾಗಿ ಅವರೆಂದರು
"ಸಾಯುವುದೆಂದರೆ...
ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರರಾಗಿರುವ ಕನ್ನಡಿಗ ಡಾ.ವಿವೇಕ ಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸುವಂತೆ ಶಾಸಕ ದಿನೇಶ ಗೂಳಿಗೌಡ ಸಲಹೆ ನೀಡಿದರು.
ಮಂಡ್ಯ...
ಮಂಡ್ಯದ ಕರ್ನಾಟಕ ಸಂಘವು ವಿಚಾರಗೋಷ್ಠಿ, ಕಾರ್ಯಗಾರ, ಗಮಕವಾಚನ-ವ್ಯಾಖ್ಯಾನ, ಪುಸ್ತಕಗಳ ಪ್ರಕಟಣೆ-ಬಿಡುಗಡೆ ಇವೇ ಮೊದಲಾದ ಹಲವು ಸಾಹಿತ್ಯಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಹಾಗೂ ಹೆಚ್ಚೆಚ್ಚು ಮಹಿಳೆಯರನ್ನು, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ,...
✍️ ಗಿರೀಶ್ ತಾಳಿಕಟ್ಟೆ
ನೀವು
ಹಸಿವಿಗಾಗಿ
ಅಕ್ಕಿ ಕೇಳಿ,
ಅವರು
ನಿಮ್ಮ ಮನೆಯ
ಸಾವಿನ ಲೆಕ್ಕ
ಕೇಳುತ್ತಾರೆ;
ಬಿದ್ದ ಹೆಣದ ಹಿಂದೆ
ಸಾಬರ ನೆರಳಿಗಾಗಿ
ತಲಾಷು ಮಾಡುತ್ತಾರೆ!
ನೀವು
ತಲೆಯ ಮೇಲೊಂದು
ಸೂರು ಕೇಳಿ,
ಅವರು
ನಿಮ್ಮ ನೆತ್ತಿ ಮೇಲಿನ
ಟೋಪಿಯ ಬಣ್ಣವ
ಪರಿಶೀಲಿಸುತ್ತಾರೆ;
ಮತಾಂಧತೆಯ
ಮೆಟ್ಟಿಲ
ಮೇಲೆ ನಿಂತು
ನಿಮಗೆ
ನಿರಪೇಕ್ಷತೆಯ
ಬಿಟ್ಟಿ ಪಾಠವ
ಬೋಧಿಸುತ್ತಾರೆ!
ನೀವು
ಬದುಕಿಗಾಗಿ
ಉದ್ಯೋಗ ಕೇಳಿ,
ಅವರು ನಿಮಗೆ
ಪಕೋಡ ಮಾರಲು
ಹೇಳುತ್ತಾರೆ;
ಗ್ಯಾರೇಜು
ಹೊಟೇಲುಗಳಲ್ಲಿ
ಕೆಲಸ
ಮಾಡುವವರ್ಯಾರೆಂದು?
ನಿಮ್ಮನ್ನೇ ಧಮಕಿಸಿ
ಪ್ರಶ್ನಿಸುತ್ತಾರೆ!
ನೀವು
ದುಬಾರಿ
ದರಗಳ ಕುರಿತು
ತಕರಾರು ಹೇಳಿ,
ಅವರು
ನಿಮ್ಮ ಬಳಿ
ದೇಶಭಕ್ತಿಯ
ಸರ್ಟಿಫಿಕೇಟು
ಕೇಳುತ್ತಾರೆ;
ದೊರೆಯ
ದುಂದುವೆಚ್ಚವ
ನಯವಾಗಿ
ಮುಚ್ಚಿಹಾಕುತ್ತಾರೆ!
ನಿಮ್ಮ
ಪಾಡಿಗೆ...