Sunday, November 22, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಒಂದೂವರೆ ವರ್ಷದಲ್ಲಿ ₹157 ಕೋಟಿ ಸಹಾಯಧನ ಹರಿದು ಬಂದಿದೆ – ಚಲುವರಾಯಸ್ವಾಮಿ

ನಾಗಮಂಗಲ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಒಂದು ವರ್ಷ ಆರುತಿಂಗಳ ಅವಧಿಯಲ್ಲಿ  ಈ ಅವದಿಯಲ್ಲಿ ನಾಗಮಂಗಲ ಕ್ಷೇತ್ರಕ್ಕೆ ಕೃಷಿ ಇಲಾಖೆಯಿಂದ 157.45ಕೋಟಿ ರೂಗಳ ಸಹಾಯ ಧನ ಹರಿದು ಬಂದಿದೆ ಎಂದು ನಾಗಮಂಗಲ ಶಾಸಕರೂ ಆದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ನಾಗಮಂಗಲ ಕ್ಷೇತ್ರಕ್ಕೆ ಯಾವ ಯೋಜನೆಯಡಿ ಎಷ್ಟು ಅನುದಾನ ಹರಿದು ಬಂದಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಅದ ವಿವರ ಕೆಳಕಂಡಂತಿದೆ.

 ಬೆಳೆ ವಿಮೆ ಯೋಜನೆ
⁠2022-23ನೇ ಸಾಲಿನಲ್ಲಿ ಬೆಳೆ ಪರಿಹಾರ 9118 ರೈತರಿಗೆ ರೂ.4ಕೋಟಿ
2023-24ನೇ ಸಾಲಿನಲ್ಲಿ ಬೆಳೆ ವಿಮೆ ಪರಿಹಾರ 15107 ರೈತರಿಗೆ ಮೊತ್ತ ರೂ.8 ಕೋಟಿ

ಕಚೇರಿ ಕಟ್ಟಡ
ಬೆಳ್ಳೂರು, ದೇವಲಾಪುರ, ಚಿಣ್ಯ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ನೂತನ ಕಟ್ಟಡ ನಿರ್ಮಿಸಲು ರೂ.8 ಕೋಟಿ ಮಂಜೂರು ಮಾಡಲಾಗಿದೆ.

ಬೆಳೆ ವಿಮಾ ಯೋಜನೆ

2022-23ನೇ ಸಾಲಿನಲ್ಲಿ 9,118 ರೈತರಿಗೆ ಬೆಳೆ ವಿಮೆ ಪರಿಹಾರ ರೂ. 4 ಕೋಟಿ

2023-24ನೇ ಸಾಲಿನಲ್ಲಿ 15,107 ರೈತರಿಗೆ ಬೆಳೆ ವಿಮೆ ಪರಿಹಾರ ರೂ. 8 ಕೋಟಿ

ಬರ ಪರಿಹಾರ

2023-24ರ ಮುಂಗಾರು ಹಂಗಾಮಿನಲ್ಲಿ 35,105 ರೈತರಿಗೆ 20 ಕೋಟಿ ರೂ.

ಕೃಷಿ ಯಾಂತ್ರೀಕರಣ

622 ರೈತ ಫಲಾನುಭವಿಗಳಿಗೆ 2 ಕೋಟಿ ರೂ.ಗಳ ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ.

ಸೂಕ್ಷ್ಮ ನೀರಾವರಿ ಯೋಜನೆ

1,229 ಫಲಾನುಭವಿಗಳಿಗೆ 2.5 ಕೋಟಿ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಗಳನ್ನು ವಿತರಿಸಲಾಗಿದೆ.

ಕೃಷಿ ಭಾಗ್ಯ ಯೋಜನೆ

130 ಫಲಾನುಭವಿಗಳಿಗೆ ರೂ.81 ಲಕ್ಷ ಸಹಾಯಧನ ಪಾವತಿಸಲಾಗಿದೆ. (ಕೃಷಿ ಹೊಂಡ, ತಂತಿ ಬೇಲಿ, ಪಾಲಿಥಿನ್ ಕವರ್, ಡೀಸೆಲ್ ಎಂಜಿನ್)

ಜಲಾನಯನ ಅಭಿವೃದ್ಧಿ ಯೋಜನೆ

230 ಫಲಾನುಭವಿಗಳಿಗೆ ಬೋರ್‌ವೆಲ್ ಮತ್ತು ಮೋಟಾರ್ ಅಳವಡಿಸಲು ರೂ. 99 ಲಕ್ಷ ಸಹಾಯಧನ ಪಾವತಿಸಲಾಗಿದೆ.

ಜಲಾನಯನ ಇಲಾಖೆಯ NMSA-RAD ಯೋಜನೆ

361 ಫಲಾನುಭವಿಗಳಿಗೆ ರೂ. 2 ಕೋಟಿ ಸಹಾಯಧನ (ಹೊನ್ನಾವರ, ಇಜ್ಜಲಘಟ್ಟ, ಸುಖಧರೆ, ಕಸುವನಹಳ್ಳಿ, ಚುಂಚನಹಳ್ಳಿ, ಅಂಚೆಭುವನಹಳ್ಳಿ, ಮೂಡಲಮಲ್ಲಹಳ್ಳಿ ಮತ್ತು ಕುರಿಕೆರೆ ಗ್ರಾಮ)

14-12-2024 ರಂದು ನಡೆದ ಕೃಷಿ ಸಚಿವರ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ವಿವಿಧಯೋಜನೆಯಡಿ ಸವಲತ್ತುಗಳನ್ನು ವಿತರಿಸುವ ಫಲಾನುಭವಿಗಳ ವಿವರ

ಜಲಾನಯನ.NMSA RAD.ಯೋಜನೆಯಲ್ಲಿ 150.ಫಲಾನುಭವಿಗಳಿಗೆ.45 ಲಕ್ಷ ರೂ⁠
⁠ಸೂಕ್ಷ್ಮ ನೀರಾವರಿ(Sprinkler pipe) 100 ಫಲಾನುಭವಿಗಳಿಗೆ 20 ಲಕ್ಷರೂ
ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ 55 ರೈತರಿಗೆ 35 ಲಕ್ಷರೂ
⁠ಕೃಷಿ ಭಾಗ್ಯ ಯೋಜನೆಯಡಿ ಡೀಸಲ್ ఇంజిನ್. 25 ರೈತರಿಗೆ 6.65 ಲಕ್ಷರೂಗಳು.
⁠ಕೃಷಿ ಸಂಸ್ಕರಣೆ (ಟಾರ್ಪಲಿನ್, ರಾಗಿಫ್ಲೋರ್ ಮಿಲ್) 25 ರೈತರಿಗೆ 1.50 ಲಕ್ಷರೂಗಳು
⁠FNS (PVC ಪೈಪ್) 25 ರೈತರಿಗೆ 1.00 ಲಕ್ಷರೂಗಳು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ