ವರದಿ : ಪ್ರಭು ವಿ ಎಸ್
3 ದಶಕಗಳ ನಂತರ ತುಂಬಿದ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಕೆರೆಗೆ ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ಮುಖಂಡ ಟಿ.ಎಚ್.ಚೆನ್ನೆಗೌಡ ಬಾಗಿನ ಅರ್ಪಿ ಸಿದರು.
ಈ ಸಂದರ್ಭದಲ್ಲಿ ಕೆರೆಗೆ ಪ್ರಥಮ ಪೂಜೆ ಸಲ್ಲಿಸಿದ ಬಳಿಕ ಮುತ್ತುರಾಯ ದೇವಾಲಯ ಅರ್ಚಕ ವಾಸು ಅವರ ನೇತೃತ್ವದಲ್ಲಿ ಐದು ಮಂದಿ ಮುತ್ತೈದೆಯರು ಪೂಜೆ ಸಲ್ಲಿಸಿ, ಬಳಿಕ ಕೆರೆಗೆ ಬಾಗಿನ ಅರ್ಪಿಸಲಾಯಿತು.
ಮುಖಂಡ ಟಿ.ಎಚ್.ಚೆನ್ನೆಗೌಡ ಮಾತನಾಡಿ, ಕಳೆದ 3 ದಶಕಗಳ ಹಿಂದೆ ಗ್ರಾಮದ ಕೆರೆ ತುಂಬಿತ್ತು, ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೆರೆ ತುಂಬಿ ಕೋಡಿ ಬಿದ್ದಿರುವುದು ಸ್ಥಳೀಯ ರೈತರಲ್ಲಿ ಹರ್ಷ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಿಹಿ ವಿತರಣೆ ಮಾಡಲಾಯಿತು, ಗ್ರಾಮದ ಮಹಿಳೆಯರು ಕೆರೆಗೆ ಆರತಿ ಬೆಳಗುವ ಮೂಲಕ ವಿಶೇಷ ಪೂಜೆ ನೆರವೇರಿಸಿದರು.
ಗ್ರಾಮದ ಮುಖಂಡರಾದ ಮಹೇಂದ್ರ, ಮೂಗಣ್ಣ, ಮುತ್ತುರಾಜು, ರವಿಪಾಳ್ಯ, ಮಹಾದೇವ, ಮುತ್ತುರಾಜು ಗ್ವಾದ, ಪುನೀತ್, ಟಿ.ಕೆ.ಮಹದೇವ ಶೇರ್ಪಾ,ತೀರ್ಥ, ಮುತ್ತೇಶ ಹಾಗೂ ಕಾಳೇಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.




