Thursday, November 19, 2026

ಪ್ರಾಯೋಗಿಕ ಆವೃತ್ತಿ

ವೈಚಾರಿಕ ಚಿಂತನೆ ಮೂಡಿಸಲು ನಾಟಕ ಸಹಕಾರಿ

ನಾಟಕಗಳು ಕೇವಲ ಕಲೆಗೆ ಮಾತ್ರ ಸೀಮಿತವಾಗದೆ ವೈಜ್ಞಾನಿಕ ಮನೋಭಾವನೆ, ವೈಚಾರಿಕ ಚಿಂತನೆಗಳನ್ನು ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದು ಡಯಟ್ ಪ್ರಾಂಶುಪಾಲ ಎಂ.ಶಿವಮಾದಪ್ಪ ಹೇಳಿದರು.

ಮಂಡ್ಯ ನಗರದ ಸಂತ ಜೋಸೆಫರ ಬಿ.ಇಡಿ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ ನಡೆದ ವಿಭಾಗ ಮಟ್ಟದ ನಾಟಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿದರು.

ವಿದ್ಯಾರ್ಥಿ ದಿಸೆಯಲ್ಲಿಯೇ ಅರಿವು ಮೂಡಿಸುವ ಉದ್ದೇಶದಿಂದ ವಿಜ್ಞಾನ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಮೂಲಕ  ತಿಳುವಳಿಕೆ ಮೂಡಿಸುವ ಕೆಲಸವಾಗುತ್ತಿದೆ ಎಂದರು.

ವಿಜ್ಞಾನ ನಾಟಕ ಬಹಳ ಪ್ರಾಚೀನ ಕಾಲದಿಂದಲೂ ಚಿರಪರಿಚಿತವಾಗಿದೆ, ಗ್ರಾಮೀಣ ಪ್ರದೇಶದಲ್ಲಿ ನಾಟಕಗಳು ಆಕರ್ಷಣೀಯವಾಗಿ ಬೆಳೆದು ಬಂದಿದೆ. ಭಾರತದಲ್ಲಿ ಮೂಢನಂಬಿಕೆಗೆ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ
ಹೆಚ್ಚು ಒತ್ತು ಕೊಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕ ಸತ್ಯ ಗೊತ್ತಿಲ್ಲದೇ ಎಲ್ಲವನ್ನು ಒಪ್ಪಿಕೊಳ್ಳುತ್ತಾರೆ, ಇತಂಹ ಮನೋಭಾವ ಬದಲಾಗಬೇಕು ಎಂದರು.

ಸಿಸ್ಟರ್ ಫ್ರಿಡೋಲಿನ ಮಾತನಾಡಿ, ವಿಜ್ಞಾನ ಸತ್ಯಕ್ಕೆ ತುಂಬಾ ಹತ್ತಿರವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಹೆಚ್ಚಾಗಿ ತಿಳಿಯಪಡಿಸಲು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ, ಮಡಿಕೇರಿಯ ಐದು ಜಿಲ್ಲೆಗಳಿಂದ
ಸ್ಪರ್ಧಾಳುಗಳು ಹಾಗೂ ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು. ಇದರಲ್ಲಿ ಚಾಮರಾಜನಗರ ಪ್ರಥಮ, ಮೈಸೂರು ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ರಾಮನಗರ ತಂಡಗಳು ಪಡೆದುಕೊಂಡವು.

ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಡಾ.ಬಿ.ವಿ.ನಂದೀಶ್, ವಿಷಯ ಪರಿವೀಕ್ಷಕ
ನಂಜರಾಜು, ಡಯಟ್ ಉಪನ್ಯಾಸಕರಾದ ಡಾ.ರವಿ, ಎಸ್.ಸಿದ್ದರಾಜು, ಪ್ರಾಂಶುಪಾಲ ಶಿವಶಂಕರ್, ತೀರ್ಪುಗಾರ ನಂದೀಶ್ ಹಾಜರಿದ್ದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ