-
ಹೆದರಿ ಓಡಿ ಹೋಗುವ ಜಾಯಮಾನ ಪುಟ್ಟರಾಜು ಅವರದಲ್ಲ
- ಸವಾಲು ಸ್ವೀಕರಿಸಲು ಸಿದ್ಧ- ಜೆಡಿಎಸ್ ಮುಖಂಡರ ಸ್ಪಷ್ಟನೆ
ಸಂಸದೆ ಸುಮಲತಾ ಅಂಬರೀಶ್ ಅವರು ಭ್ರಷ್ಟಾಚಾರದ ಕುರಿತು ಮಾಡಿರುವ ಅಣೆ-ಪ್ರಮಾಣದ ಸವಾಲನ್ನು ಶಾಸಕ ಸಿ.ಎಸ್.ಪುಟ್ಟರಾಜು ಸ್ವೀಕರಿಸಿದ್ದು, ಸುಮಲತಾ ಅವರು ಅಣೆ-ಪ್ರಮಾಣ ಮಾಡಲು ಬರಲಿ ಎಂದು ಜೆಡಿಎಸ್ ರೈತ ವಿಭಾಗದ ಮಾಜಿ ರಾಜ್ಯ ಉಪಾಧ್ಯಕ್ಷ ಕ್ಯಾತನಹಳ್ಳಿ ಪ್ರವೀಣ್ (ಗವಿಗೌಡ ) ಆಗ್ರಹಿಸಿದ್ದಾರೆ.
ಪಾಂಡವಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆಯವರ ರೀತಿ ಹೆದರಿ ಓಡಿ ಹೋಗುವ ಜಾಯಮಾನ ಪುಟ್ಟರಾಜು ಅವರದಲ್ಲ, ಆದ್ದರಿಂದ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡಲೇ ದಿನಾಂಕ, ಸ್ಥಳ ನಿಗದಿ ಮಾಡಿ ಅಣೆ- ಪ್ರಮಾಣ ಮಾಡಲು ಸಿದ್ದರಾಗಿ ಬರಬೇಕು ಎಂದರು.
ಸೆ.25ರಂದು ಸಿಎಸ್ಪಿ ಹುಟ್ಟುಹಬ್ಬ ಆಚರಣೆ
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರ 59ನೇ ಹುಟ್ಟುಹಬ್ಬವನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಬಹಳ ವಿಜೃಂಭಣೆಯಿಂದ ಆಚರಿಸಲು ಜೆಡಿಎಸ್ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದರು.
ಸಾಮಾನ್ಯ ಸಭೆ
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಸೆ.18ರಂದು ಭಾನುವಾರ ಬೆಳಗ್ಗೆ 11.30ಕ್ಕೆ ಪಾಂಡವಪುರ ತಾಲ್ಲೂಕು ಗೃಹ ನಿರ್ಮಾಣ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಿ.ಇ.ರವಿಕುಮಾರ್ ತಿಳಿಸಿದರು.
ಸಂಘದ ಸದಸ್ಯರು ಕಡ್ಡಾಯವಾಗಿ ಎರಡು ಸಾಮಾನ್ಯ ಸಭೆಗಳಿಗೆ ಹಾಜರಾಗಬೇಕು. ಜತೆಗೆ ಎರಡು ಸಾವಿರ ರೂ.ಗಳವರೆಗೆ ವ್ಯವಹಾರ ನಡೆಸಬೇಕು. ಇಲ್ಲದಿದ್ದರೆ ಚುನಾವಣೆಗೆ ಸ್ಪರ್ಧೆ ಮಾಡಲು ಹಾಗೂ ಮತದಾನದ ಆರ್ಹತೆಯೂ ಸಿಗುವುದಿಲ್ಲ ಎಂದರು.
ಅಂಚೆ ಕಚೇರಿ ಮೂಲಕ ಸಂಘದ ಎಲ್ಲಾ ಸದಸ್ಯರಿಗೆ ಸಾಮಾನ್ಯ ಸಭೆಯ ಆಹ್ವಾನ ಪತ್ರಿಕೆ ರವಾನಿಸಲಾಗಿದೆ. ಆಹ್ವಾನ ಪತ್ರಿಕೆ ತಲುಪದಿದ್ದವರು ಇದನ್ನೇ ಆಹ್ವಾನವೆಂದು ತಿಳಿದು ಸಭೆಗೆ ತಪ್ಪದೇ ಹಾಜರಾಗಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಎಂ.ಮುರಳೀಧರ್, ಎನ್.ಭಾಸ್ಕರ್, ಪ್ರಭಾರ ಕಾರ್ಯದರ್ಶಿ ಎಚ್.ಎಸ್.ಪ್ರಕಾಶ್ ಇತರರಿದ್ದರು.




