Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಂಘದ ಅಭಿವೃದ್ದಿಗೆ ಕೈ ಜೋಡಿಸಿ : ಶೇಖರ್ 

ಷೇರುದಾರರ ಸಮಸ್ಯೆಗಳನ್ನು ಬಗೆಹರಿಸಲಾಗುವುದು, ಸದಸ್ಯರು ಸಲಹೆ ಸಹಕಾರಗಳನ್ನು ನೀಡಿ, ಸಂಘದ ಅಭಿವೃದ್ದಿಗೆ ಕೈ ಜೋಡಿಸಬೇಕೆಂದು ರೈತರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಯು.ಸಿ.ಶೇಖರ್‌ ತಿಳಿಸಿದರು.

ಮಂಡ್ಯ ನಗರದ ರೈತ ಸಭಾಂಗಣದಲ್ಲಿ ನಡೆದ ರೈತರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ 51ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತ ಸಭಾಂಗಣ ನವೀಕರಣಕ್ಕೆ ಸಕಲ ಪ್ರಯತ್ನ ಮಾಡಲಾಗುವುದು, ಅಧಿಕಾರಿಗಳನ್ನು ಸಂಪರ್ಕಿಸಿ ರೈತ ಸಭಾಂಗಣದ ಕಾಮಗಾರಿ ಮಾಡಲು ಮನವಿ ಮಾಡಲಾಗಿದೆ. ಶಾಸಕರ ಅನುದಾನ ಸೇರಿದಂತೆ ಇತರೆ ಅನುದಾನದಿಂದಲೂ ರೈತ ಸಭಾಂಗಣದ ಅಭಿವೃದ್ಧಿಗೆ ಒತ್ತಾಯಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಜೆ.ಪಿ.ಮಹೇಶ್‌, ನಿರ್ದೇಶಕರಾದ ಬಿ.ಪಿ.ಸೋಮಶೇಖರ್, ಕೆ.ಸಿ.ರವೀಂದ್ರ ಎಚ್‌.ಎಸ್‌.ಯೋಗೇಶ್‌ಕುಮಾರ್, ಜಿ.ಎನ್‌.ಉದಯ್‌ಕುಮಾರ್, ಸಿ.ಕೆ.ಪಾಪಯ್ಯ, ಎಂ.ಪಿ.ಶ್ರೀಧರ್, ಕೆ.ಹೇಮಲತಾ, ಜಿ.ಎಸ್.ಅಂಜನಾ, ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ಅರಸ್‌ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ