Tuesday, November 24, 2026

ಪ್ರಾಯೋಗಿಕ ಆವೃತ್ತಿ

ಆರೋಪಿಗೆ ಪ್ಲಾಸ್ಟಿಕ್‌ ಕವರ್ ಹಾಕಿ ಅಮಾನವೀಯತೆ ಮೆರೆದ ಪೊಲೀಸರು


  • ಅಬಕಾರಿ ಪೊಲೀಸರ ಎಡವಟ್ಟಿನಿಂದ ಆರೋಪಿಗೆ ನರಕ ದರ್ಶನ
  • ಅಧಿಕಾರಿಗಳ ಸಮ್ಮುಖದಲ್ಲೇ ಅಬಕಾರಿ ಪೊಲೀಸರ ಯಡವಟ್ಟು

ಗಾಂಜಾ ಸಾಗಿಸುತ್ತಿದ್ದಾನೆ ಎನ್ನುವ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿಗೆ 1 ರೂಪಾಯಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಹಾಕಿ ಫೋಟೋಗೆ ಫೋಜ್‌ ಕೊಡಿಸಿದ್ದ ಪೊಲೀಸರ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ವಿಜಯಪುರ ಜಿಲ್ಲೆ ಇಂಡಿ ಪೊಲೀಸ್‌ ಠಾಣೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಹಿರೆರೂಗಿ ಗ್ರಾಮದ ನಿವಾಸಿ ಸೋಮನಿಂಗ್ ಗುಡಿ ಎಂಬ ವ್ಯಕ್ತಿಯು ರೂಗಿ-ಅಥರ್ಗಾ ಮಾರ್ಗದ ಪೀರಾಪೂರ ದರ್ಗಾ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. 

ಖಚಿತ ಮಾಹಿತಿ ಪಡೆದ ವಿಜಯಪುರದ ಅಬಕಾರಿ ಪೊಲೀಸರು ಆತನನ್ನು ಬಂಧಿಸಿ 40 ಸಾವಿರ ರೂಪಾಯಿ ಮೌಲ್ಯದ 950 ಗ್ರಾಂ. ಗಾಂಜಾ ವಶಕ್ಕೆ ಪಡೆದಿದ್ದಾರೆ. 

ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತಂದಾಗ ಕಪ್ಪು ಬಟ್ಟೆ ಹಾಕಿ ಮಾಧ್ಯಮಗಳ ಮುಂದೆ ಫೋಟೋ ತೆಗೆಸುವುದು ವಾಡಿಕೆ. ಬಂಧಿತನು ಆರೋಪಿಯೋ ಅಥವಾ ಅಪರಾಧಿಯೋ ಎನ್ನುವುದು ತೀರ್ಮಾನವಾಗುವ ಮುನ್ನ ಆರೋಪಿಗಳ ಗುರುತು ಸಿಗಬಾರದೆಂಬ ಉದ್ದೇಶದಿಂದ ಅವರ ಮುಖಕ್ಕೆ ಕಪ್ಪು ಬಟ್ಟೆ ಹಾಕಲಾಗಿರುತ್ತದೆ. 

ಆದರೆ, ಇಂಡಿ ಪೊಲೀಸರು ಕಪ್ಪು ಬಟ್ಟೆ ಬದಲಿಗೆ ಮಾರ್ಕೆರ್ಟ್‌ನಲ್ಲಿ ಕೇವಲ 1 ರೂಪಾಯಿಗೆ ಸಿಗುವ ಕಪ್ಪು ಬಣ್ಣದ ಕ್ಯಾರಿಬ್ಯಾಗ್‌ ಅನ್ನು ಆರೋಪಿಗೆ ಹಾಕಿ ಕೂರಿಸಿದ್ದಾರೆ. ಆ ಪೋಟೋ ತೆಗೆದು ಮಾಧ್ಯಮಗಳಿಗೆ ರವಾನಿಸಿದ್ದಾರೆ. ಅಬಕಾರಿ ಪೊಲೀಸರ ಈ ಎಡವಟ್ಟಿನಿಂದಾಗಿ ಆರೋಪಿಯು ಕೆಲ ಕಾಲ ಗಾಳಿಯ ಕೊರತೆಯಿಂದ ಉಸಿರಾಡಲು ಸಾಧ್ಯವಾಗಿದೆ ನರಕ ಯಾತನೆ ಅನುಭವಿಸಿದ್ದಾನೆ ಎನ್ನಲಾಗಿದೆ.

ಮಾಧ್ಯಮಗಳಲ್ಲಿ ಫೋಟೋ ನೋಡಿದ ಸಾರ್ವಜನಿಕರು ಅಮಾನವೀಯತೆ ಮೆರೆದ ವಿಜಯಪುರ ಅಬಕಾರಿ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪರ್ಯಾಸವೆಂದರೆ ಆರೋಪಿ ಮುಖಕ್ಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಕಿ ಫೋಟೋ ತೆಗೆಸಿರುವ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರಾದ ಮಂಜುನಾಥ ಶಿರಹಟ್ಟಿ ಸೇರಿದಂತೆ ಹಲವು ಅಧಿಕಾರಿಗಳಿದ್ದರೂ ಕ್ಯಾರಿಬ್ಯಾಗ್ ಬಳಕೆ ಮಾಡದಂತೆ ಸೂಚನೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ