ಮುಂದಿನ ಪೀಳಿಗೆಯ ಸಂರಕ್ಷಣೆಗಾಗಿ ಸಸ್ಯ ಸಂಪತ್ತು ವೃದ್ದಿಗೆ ಎಲ್ಲರೂ ಕೈಜೊಡಿಸೋಣ ಎಂದು ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಎಂ.ಬಿ.ರಮೇಶ್ ವಿಶ್ವಕರ್ಮ ಹೇಳಿದರು.
ಮಂಡ್ಯ ನಗರದ ಶ್ರೀಕೆಂಪೇಗೌಡ ಉದ್ಯಾನವನದಲ್ಲಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ಸೇವಾ ಪಾಕ್ಷಿಕ ಅಭಿಯಾನ ನಿಮಿತ್ತ ಸಸ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರದಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ, ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ, ವನಮಹೋತ್ಸವ, ಎರಡು ದಿನಗಳ ಸ್ವಚ್ಛತಾ ಅಭಿಯಾನ, ನೀರಿನ ಸಂರಕ್ಷಣೆಯ ಜಾಗೃತಿ ಅಭಿಯಾನ ಸಾಗುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿವೇಕ್, ನಗರಸಭಾ ಸದಸ್ಯ ಶಿವಕುಮಾರ್ ಕೆಂಪಯ್ಯ ಮತ್ತಿತರರಿದ್ದರು.




