Friday, November 20, 2026

ಪ್ರಾಯೋಗಿಕ ಆವೃತ್ತಿ

ಉಜ್ವಲ ಭವಿಷ್ಯದ ಕಡೆ ಗಮನವಿರಲಿ

ಭವಿಷ್ಯ ರೂಪಿಸಿಕೊಳ್ಳುವ ಕಡೆ ವಿದ್ಯಾರ್ಥಿಗಳು ಸಾಗಲಿ ಸೇವಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೀಡುವ ಉಚಿತ ಸೌಲಭ್ಯಗಳನ್ನು ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕು ಎಂದು ಡಯಟ್‌ ಉಪನ್ಯಾಸಕ ಸಿದ್ದರಾಜು ತಿಳಿಸಿದರು.

ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂಗ್‌ ಸಂಸ್ಥೆ ಹಾಗೂ ಯೂತ್‌ ಫಾರ್‌ ಸೇವಾ ಸಂಸ್ಥೆ ವತಿಯಿಂದ ನಡೆದ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಬ್ಯಾಗ್‌, ಲೇಖನಿ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಮಹನೀಯರ ಬಲಿದಾನವೇ ನಡೆದು ಹೋಗಿದೆ. ಅಂತಹ ಮಹಾನ್‌ ವ್ಯಕ್ತಿಗಳನ್ನು ಮಾತ್ರ ಸಮಾಜದಲ್ಲಿ ನೆನೆದುಕೊಳ್ಳುತ್ತಾರೆ, ಜೊತೆಗೆ ಸಮಾಜದಲ್ಲಿ ಸೇವೆ ನೀಡಿದವರನ್ನು ಸೇರಿದಂತೆ, ಹಾಗಾಗಿ ಅಂತಹವರ ಮಾರ್ಗದರ್ಶನ ಹಾಗೂ ಆದರ್ಶಗಳನ್ನು ಪಾಲಿಸುವುದು ವಿದ್ಯಾರ್ಥಿಗಳಿಗೆ ಮುಖ್ಯವಾಗಬೇಕು ಎಂದರು.

ಯೂತ್‌ ಫಾರ್‌ ಸೇವಾ ಸಂಸ್ಥೆಯ ಜಿಲ್ಲಾ ಸಂಯೋಜಕ ಅವಿನಾಶ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿಯೇ ಸಮಾಜಕ್ಕೆ ಉತ್ತಮ ಸೇವೆ ಹಾಗೂ ಹೆಸರು ತಂದುಕೊಡುವ ಕೆಲಸ ಮಾಡುವ ಕಡೆ ಗಮನ ಹರಿಸಬೇಕು. ಶಾಲೆಯಲ್ಲಿ ಓದುವುದರ ಜೊತೆಗೆ ನಡೆ, ನುಡಿ ಬದಲಾವಣೆಯಿಂದ ಇತರರಿಗೂ ಗೌರವ ನೀಡುವ ಹಾಗೆ ನಡೆದುಕೊಳ್ಳಬೇಕು. ಮೊದಲು ಹಿರಿಯರನ್ನು ಗೌರವಿಸುವುದು ಕಿರಿಯರನ್ನು ಪ್ರೀತಿಸುವುದನ್ನು ಕಲಿತುಕೊಳ್ಳಬೇಕು ಎಂದು ತಿಳಿಸಿದರು.

ಮೂಗ್‌ ಸಂಸ್ಥೆ ವತಿಯಿಂದ ಶಾಲೆಯ 81 ವಿದ್ಯಾರ್ಥಿಗಳಿಗೆ ಬ್ಯಾಗ್‌, ನೋಟ್‌ ಬುಕ್‌, ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕೌಶಿಕ್‌, ಅರುಣ್‌, ಮಿನರ್ವ, ಎಸ್‌ಡಿಎಂಸಿ ಅಧ್ಯಕ್ಷ ರುದ್ರೇಶ್, ಸದಸ್ಯ ಚಂದ್ರು, ಪ್ರಬಾರಿ ಮುಖ್ಯಶಿಕ್ಷಕ ನಾಗರಾಜು ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ