ಮಂಡ್ಯ ಉತ್ತರ ವಲಯದ ಸರ್ಕಾರಿ ಪ್ರೌಢಶಾಲೆ ಮುದಗಂದೂರಿನ ಬಾಲಕಿಯರ ಖೋ ಖೋ ತಂಡವು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ.
ಶ್ರೀರಂಗಪಟ್ಟಣದಲ್ಲಿ ನಡೆಯುವ 17 ವರ್ಷ ವಯೋಮಿತಿಯ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು ಖೋ ಖೋ ಕ್ರೀಡೆಯಲ್ಲಿ ಉತ್ತಮ ಸಾಮರ್ಥ್ಯ ತೋರುವ ಮೂಲಕ ಸಾಧನೆ ಮಾಡಿದ್ದಾರೆ. ಅವರ ಕ್ರೀಡಾ ಸಾಧನೆಯಿಂದ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಅವರು ಮುಂದೆಯೂ ಖೋ ಖೋ ಕ್ರೀಡೆಯಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಶಾಲೆಯ ಮುಖ್ಯೋಪಾಧ್ಯಾಯ ಎಂ.ಸಿ. ಶಿವಾನಂದ ಶುಭ ಹಾರೈಸಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಉಷಾಬಾಯಿ ಟಿ.ಎಸ್, ಸಿಬ್ಬಂದಿ ವರ್ಗದ ಹರ್ಷ, ಸುರೇಶ್, ಪುಟ್ಟಸ್ವಾಮಿಗೌಡ , ರಮೇಶ್ , ದೀಪಕ್, ರಮ್ಯಾ ಶೆಟ್ಟಿ, ಲಿಖಿತ್, ಜ್ಯೋತಿ ಇತರರು ಭಾಗವಹಿಸಿದ್ದರು




