Friday, November 20, 2026

ಪ್ರಾಯೋಗಿಕ ಆವೃತ್ತಿ

ಕ್ರೈಸ್ತ ಮಹಾಸಭಾ ಜಿಲ್ಲಾ ಘಟಕ ಉದ್ಘಾಟನೆ

ಅಖಿಲ ಭಾರತ ಕ್ರೈಸ್ತ ಮಹಾಸಭಾದ ಮಂಡ್ಯ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಸೆ.28ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯನಗರದ ರೈತ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಾಸ್ಟರ್ ಹೊಯ್ಸಳಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ ಜೋಸೆಫರ ದೇವಾಲಯದ ಧರ್ಮಗುರು ಲೂರ್ದುಪ್ರಸಾದ್, ಸಿ.ಎಸ್.ಐ ಸಾಡೆ ಸ್ಮಾರಕ ದೇವಾಲಯದ ಸಭಾ ಪಾಲಕ ಜಯಶೇಖರ್ ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು ಎಂದರು.

ಶಾಸಕ ಮಧುಮಾದೇಗೌಡ, ಮಾಜಿ ಸಂಸದ ಚಲುವರಾಯಸ್ವಾಮಿ, ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧ್ಯಕ್ಷ ಕೆನಡಿ ಶಾಂತಕುಮಾರ್, ಅಖಿಲ ಭಾರತ ಕ್ರೈಸ್ಥ ಮಹಾಸಭಾದ ಸಂಸ್ಥಾಪಕ ಪ್ರಜ್ವಲ್ ಸ್ವಾಮಿ, ಅಖಿಲ ಭಾರತ ಕ್ರೈಸ್ಥ ಮಹಾಸಭಾದ ಮಹಿಳಾ ಅಧ್ಯಕ್ಷೆ ನವೋಮಿ ಗ್ರೇಸಿ, ವಿಷನ್ ಟಿ.ವಿ.ಸಂಸ್ಥಾಪಕ ಆನಂದ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಸಮಾಜ ಸೇವಕ ರವಿ ಗಣಿಗ, ಸಮಾಜ ಸೇವಕ ಡಾ.ಎಚ್.ಎನ್.ರವೀಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಗ್ರಾಮೀಣ ಪಿ.ಎ.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಸಮಾಜಸೇವಕ ನಾಗಣ್ಣಗೌಡ, ಬಿಎಸ್ಪಿ ಜಿಲ್ಲಾಧ್ಯಕ್ಷ ಎಸ್. ಶಿವಶಂಕರ್ ,  ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ, ಡಿಎಸ್ಎಸ್ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ,  ಜಿಲ್ಲಾ ಸಂಚಾಲಕ ಶಿವು ಮತ್ತಿತರರು ಭಾಗವಹಿಸುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಸುಧಾಕರ್, ಪ್ರಶಾಂತ್, ಲೋಕೇಶ್ ಪೀಟರ್ ಹಾಘೂ ಡೇವಿಡ್ ಉಪಸ್ಥಿತರಿದ್ದರು.

 

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ