Saturday, November 21, 2026

ಪ್ರಾಯೋಗಿಕ ಆವೃತ್ತಿ

ಮೂಢನಂಬಿಕೆಯಿಂದ ಹೊರಬರಲು ವಿಜ್ಞಾನದ ಅರಿವು ಅಗತ್ಯ

ಮೂಢನಂಬಿಕೆಯಿಂದ ಹೊರಬರಲು ವಿಜ್ಞಾನದ ಅರಿವು ಬಹಳ ಮುಖ್ಯವಾಗಿದೆ, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರಿತಪ್ಪುಗಳ ಅವಕಲೋನ ಮಾಡಬೇಕು, ಆಗ ಮಾತ್ರ ಯುವ ಸಮೂಹ ಸಾಧನೆಯ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ರೈತ ನಾಯಕಿ ಸುನಂದ ಜಯರಾಂ ಹೇಳಿದರು.
ಮಂಡ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪೊಲೀಸ್‌ ಕಾಲೋನಿ)ವಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್‌ ಜಿಲ್ಲಾ ಘಟಕದಿಂದ ‘ನಮ್ಮ ನಡಿಗೆ ವಿಜ್ಞಾನದ ಕಡೆಗೆ’ ಎಂಬ ವಿಚಾರ ಸಂಕಿರಣವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಅಸ್ತಿತ್ವದಲ್ಲಿರುವ ಮೌಢ್ಯಗಳೇ ಸರಿ ಎನ್ನುವ ಮಟ್ಟಿಗೆ ನಮಗೆ ಅಜ್ಞಾನ ಆವರಿಸಿದೆ, ಇಂದು ಸಮಾಜದಲ್ಲಿ ತಾರತಮ್ಯ ಮಿತಿಮೀರಿದೆ. ರಾಜಕೀಯ ಹೊರತಾಗಿಯೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಿ ನೆಮ್ಮದಿಯ ಜೀವನ ಸಾಗಿಸಲು ಸಹಕಾರಿ ಆಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಭವಿಷ್ಯ ರೂಪಿಸಿಕೊಳ್ಳುವ ಒಂದು ದೊಡ್ಡ ಕನಸನ್ನು ಇಟ್ಟುಕೊಂಡು ಮುನ್ನೆಡೆಯಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್‌ ಅಧ್ಯಕ್ಷ ಚಿಕ್ಕಅರಸಿನಕೆರೆ ಶಿವಲಿಂಗಯ್ಯ ಮಾತನಾಡಿ, ಮೌಢ್ಯಕ್ಕೆ ಮಾರು ಹೋಗಿರುವ ಹೊತ್ತಿನಲ್ಲಿ ವಿಜ್ಞಾನವು ಅದರ ಅಜ್ಞಾನ ಹೋಗಲಾಡಿಲು ನಿಂತಿದೆ. ವಿಜ್ಞಾನದಿಂದ ಈ ಮೌಢ್ಯದ ಬಂಡವಾಳ ಹೊರತೆಗೆಯಬಹುದು. ಆ ಕೆಲಸವನ್ನು ನಮ್ಮ ರಾಜ್ಯಾಧ್ಯಕ್ಷ ಹುಲಿಕಲ್‌ ನಟರಾಜ್‌ ಸೇರಿದಂತೆ ಹಲವರು ಮೌಢ್ಯ ವಿರುದ್ಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವಿಷಯ ವಿಜ್ಞಾನ ಪರಿವೀಕ್ಷಕ ನಂಜರಾಜು ಅವರು ಪವಾಡ ಬಯಲು ಕಾರ್ಯಕ್ರಮದಲ್ಲಿ ಕೆಲವು ಪ್ರಾತ್ಯಕ್ಷಿಕ ನಡೆಸುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದರು. ಕಾರ್ಯಕ್ರಮದಲ್ಲಿ ಪರಿಷತ್‌ನ ಗೌರವ ಮಾರ್ಗದರ್ಶಕ ಎಂ.ವಿ.ಕೃಷ್ಣ, ಗೌರವ ಅಧ್ಯಕ್ಷ ತೂಬಿನಕೆರೆ ಲಿಂಗರಾಜು, ಖಜಾಂಚಿ ಜಯರಾಂ, ಸಂಘಟನಾ ಕಾರ್ಯದರ್ಶಿ ಮಂಗಲ ಲಂಕೇಶ್‌, ನಿರ್ದೇಶಕ ವೆಂಕಟಚಲಯ್ಯ, ನಿವೃತ್ತ ಮುಖ್ಯಶಿಕ್ಷಕ ಶಂಕರಯ್ಯ, ಪ್ರಾಂಶುಪಾಲ ಮಹದೇವಯ್ಯ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ