ವಿಶ್ವ ಮಾನವ ವಿಚಾರ ವೇದಿಕೆ ಮಳವಳ್ಳಿ ಇವರ ವತಿಯಿಂದ ಹಿರಿಯ ಸಾಹಿತಿ ಮ.ಸಿ.ನಾರಾಯಣ ಅವರ ಆದಿ ಜಾಂಬವ ವಂಶ (ಕುಲ) ಐಹಿಹ್ಯ ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅ.9ರಂದು ಬೆಳಿಗ್ಗೆ 11.30 ಗಂಟೆಗೆ ಮಂಡ್ಯನಗರದ ಹರ್ಡಿಕರ್ ಭವನದಲ್ಲಿ ನಡೆಯಲಿದೆ.
ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಮ.ಸಿ.ನಾರಾಯಣ ಅವರು, ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ಸಮಾರಂಭ ಉದ್ಘಾಟಿಸುವರು. ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್. ಅರಸ್ ಕೃತಿ ಬಿಡುಗಡೆ ಮಾಡುವರು. ಚುಸಾಪ ಜಿಲ್ಲಾಧ್ಯಕ್ಷ ಜಿ.ವಿ.ನಾಗರಾಜು ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ಕೈತಿ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಡಿ.ತಿಮ್ಮಯ್ಯ ,ಎಸ್.ಬಿ.ಐ ನಿವೃತ್ತ ಅಧಿಕಾರಿ ಎಂ.ಶಂಕರಪ್ಪ, ಆರ್.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಸಿ.ಕೆ.ಪಾಪಯ್ಯ ಭಾಗವಹಿಸುವರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ್ ಸಾಧಕರನ್ನು ಸನ್ಮಾನಿಸುವರು. ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಕೆ.ಕೃಷ್ಣಪ್ಪ, ಪುಸ್ತಕ ಮನೆ ನಂಜುಂಡಸ್ವಾಮಿ, ಹೆಚ್.ಪಿ.ಮಂಜುನಾಥ್, ಎಂ.ನಾರಾಯಣಸ್ವಾಮಿ, ಜೆ.ಪಿ.ಮಂಚಮ್ಮ ಹಾಗೂ ಮಹಾದೇವಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಯೋಗ ಶಿಕ್ಷಕ ಎಂ.ಮಲ್ಲಿಕಾರ್ಜುನಸ್ವಾಮಿ, ಮುಖಂಡ ನಂಜುಂಡಸ್ವಾಮಿ ಉಪಸ್ಥಿತರಿದ್ದರು.




