Thursday, November 19, 2026

ಪ್ರಾಯೋಗಿಕ ಆವೃತ್ತಿ

ರೈತರು ಭಿಕ್ಷುಕರಲ್ಲ ಟನ್ ಕಬ್ಬಿಗೆ 4500 ರೂ ಕೊಡಲೇಬೇಕು

ಇಂದು ಎಲ್ಲಾ ಬೆಲೆಗಳು ಹೆಚ್ಚಳವಾಗಿದ್ದು, ಕಬ್ಬು ಬೆಳೆಯಲು ರೈತರು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಿದೆ. ರೈತರು ಭಿಕ್ಷುಕರಲ್ಲ, ಅವರಿಗೆ ಟನ್ ಕಬ್ಬಿಗೆ ನ್ಯಾಯ ಬದ್ಧವಾಗಿ 4500 ರೂ. ಕೊಡಬೇಕೆಂದು ಹಿರಿಯ ರೈತ ಮುಖಂಡ ಕೀಲಾರ ಸೋಮಶೇಖರ್ ಆಗ್ರಹಿಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಂಡ್ಯದ ವಿಸಿ ಫಾರಂ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತ ನಾಯಕರನ್ನು ಬಂಧಿಸಿ ಮಂಡ್ಯ ನಗರದ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಇರುವ ಡಿಎಆರ್ ಮೈದಾನದಲ್ಲಿ ಕರೆತಂದ ಸಂದರ್ಭದಲ್ಲಿ ನುಡಿ ಕರ್ನಾಟಕ ಡಾಟ್. ಕಾಮ್ ಜೊತೆ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ರೈತರಿಗೆ ಕಬ್ಬಿನ ಇಳುವರಿ 8.5% ಕೊಡುತ್ತಾರೆ. ಆದರೆ ಮಂಡ್ಯ ಬಿಟ್ಟು ಬೇರೆ ಕಡೆ 11% ಮೇಲೆ ಬರುತ್ತೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಮೈಷುಗರ್ ಕಾರ್ಖಾನೆ ಬಿಟ್ಟು ಬೇರೆ ಕಡೆ ಕಬ್ಬು ನುರಿಸಬಾರದು ಎಂದರು.

ಮೈಷುಗರ್ ಕಾರ್ಖಾನೆಯನ್ನು ವ್ಯವಸ್ಥಾಪಕ ನಿರ್ದೇಶಕ ಅಣ್ಣಾ ಸಾಹೇಬ ಪಾಟೀಲ್ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸಕ್ಕರೆ ಬಿದ್ದ ಮೇಲೆ ಹಾಗೂ ಕೋ ಜನರೇಷನ್ ಆದ ಮೇಲೆ ಕಾರ್ಖಾನೆ ಇನ್ನೂ ಚೆನ್ನಾಗಿ ಆಗುತ್ತದೆ ಎಂಬ ವಿಶ್ವಾಸವಿದೆ. ಜನರಲ್ ಮ್ಯಾನೇಜರ್ ಶಿವಾನಂದ ಮೂರ್ತಿಯವರಿಗೆ ಮೂರು ಕಡೆ ಜವಾಬ್ದಾರಿ ಇದ್ದು ಕಾರ್ಖಾನೆಗೆ ಪ್ರತ್ಯೇಕವಾಗಿ ಒಬ್ಬ ಜನರಲ್ ಮ್ಯಾನೇಜರನ್ನು ನೇಮಕ ಮಾಡಿದರೆ ಕಾರ್ಖಾನೆಯನ್ನು ಇನ್ನು ತುಂಬಾ ಚೆನ್ನಾಗಿ ನಡೆಸಿಕೊಂಡು ಹೋಗಬಹುದು ಎಂದರು.

ಪ್ರತಿದಿನ ಎರಡು ಸಾವಿರ ಟನ್ ಅರೆಯಲಾಗುತ್ತಿದೆ. ಪ್ರತಿದಿನ ಐದು ಸಾವಿರ ಟನ್ ಅರೆಯಬೇಕಿದೆ. ಆದರೆ ಸಣ್ಣಪುಟ್ಟ ತೊಂದರೆಗಳಿದ್ದು ಕಬ್ಬು ಅರೆಯಾಗುತ್ತಿಲ್ಲ. ಅಲ್ಲದೆ ಕಾರ್ಖಾನೆಗೆ ಇದ್ದ ನೀರಿನ ಸಮಸ್ಯೆಯನ್ನು ಬಗೆಹರಿಸಿ ಕೋಣನ ಹಳ್ಳಿ ಕೆರೆಯಿಂದ ನೀರು ಪಡೆಯಲಾಗುತ್ತಿದೆ ಎಂದರು.

ವಿಸಿ ನಾಲೆ ನೀರು ಹರಿಸಲಿ ಕೋಣನಹಳ್ಳಿ ಕೆರೆಗೆ ನಗರದ ವಿವಿಧ ಬಡಾವಣೆಗಳ ಒಳಚರಂಡಿ ನೀರು ಬಿಡುತ್ತಿದ್ದಾರೆ. ಇದನ್ನೇ ತಿನ್ನುವ ಪದಾರ್ಥ ಸಕ್ಕರೆ ತಯಾರಿಕೆಗೆ ಬಳಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಕಾವೇರಿ ನಾಡಿನಲ್ಲಿ ಸಕ್ಕರೆ ಕಾರ್ಖಾನೆಗೆ ಕಾವೇರಿ ನೀರು ಹರಿಸದೆ ಕೊಳಕು ನೀರು ಹರಿಸುತ್ತಿರುವುದು ಸರಿಯಲ್ಲ. ವಿಸಿ ನಾಲೆಯಿಂದ ಕಾವೇರಿ ನೀರು ಹರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಎಂದು ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಒತ್ತಾಯಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ