ಪ್ರಧಾನಿ ಮೋದಿಯವರ ಗೆಳೆಯನೊಬ್ಬ ರಾಕೆಟ್ ವೇಗದಲ್ಲಿ ಶ್ರೀಮಂತನಾಗುತ್ತಾ, ಪ್ರಪಂಚದಲ್ಲಿ ಎರಡನೇ ಶ್ರೀಮಂತನಾಗಿದ್ದಾರೆ. ಆದರೇ ಈ ದೇಶದ ಬಡವರು, ರೈತರು ಹಾಗೂ ರೈತರ ಮಕ್ಕಳು ಏಕೆ ಶ್ರೀಮಂತರಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದರು.
ಭಾರತದಲ್ಲಿ ದ್ವೇಷ ಅಸೂಯೇ, ನಿರುದ್ಯೋಗ ಸಮಸ್ಯೆ ಸೇರಿದಂತೆ ಪದಾರ್ಥಗಳ ಬೆಲೆ ಹೆಚ್ಚಳ ಆಗುತ್ತಿದೆ. ಇವುಗಳ ಬಗ್ಗೆ ಗಮನಸೆಳೆಯಲು ಭಾರತ ಯಾತ್ರೆ ನಡೆಯುತ್ತಿದೆ ಎಂದು ರಾಹುಲ್ ಗ
ಬೆಳ್ಳೂರು ಪಟ್ಟದಲ್ಲಿ ಭಾರತ ಐಕ್ಯತಾ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ರೈತ ಹಾಗೂ ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ದೇಶದಲ್ಲಿ ನಡೆಯುತ್ತಿರುವ ಬೆಲೆ ಏರಿಕೆ. ಜಾತಿ, ಮತಗಳ ಸಂಘರ್ಷ ಇವು ದಿನೇ ದಿನೇ ಹೆಚ್ಚಾಗುತ್ತಿದೆ. ಇವುಗಳಿಗೆ ಬಿಜೆಪಿ ಸರಕಾರ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಸರಕಾರ ಬಂದರೇ ಅಗತ್ಯ ವಸ್ತಗಳ ಬೆಲೆ ಕಡಿಮೆ ಮಾಡುವುದರೊಂದಿಗೆ ರೈತರ, ಬಡವರ ಪರ ನಿಲ್ಲುತ್ತದೆ ಎಂದರು.
ಜಿಲ್ಲೆಯಲ್ಲಿ ರಾಗಿಗೆ 3000 ರೂ.ಇದ್ದಬೆಂಬಲ ಬೆಲೆಯನ್ನು 2500 ರೂ ಇಳಿಸುವ ಮೂಲಕ ರೈತರಿಗೆ ದ್ರೋಹ ಎಸಗಲಾಗಿದೆ.ದೇಶದ ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ನೀಡುತ್ತಿಲ್ಲ. ಬದಲಾಗಿ ರೈತರ ಟ್ರಾಕ್ಟರ್ ಸೇರಿದಂತೆ ಇತರೆ ಕೃಷಿ ಪರಿಕರಗಳ ಮೇಲೆ ತೆರಿಗೆ ವಿಧಿಸುತ್ತಿದೆ.ಇದು ಸರಿಯೇ ಎಂದು ಪ್ರಶ್ನಿಸಿದರು.
ಪೆಟ್ರೋಲ್, ಗ್ಯಾಸ್ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿಸಿದೆ. ಇದರಿಂದಾಗಿ ದೇಶದಲ್ಲಿ ಬಡವರು ಬದುಕು ನಡೆಸುವುದೇ ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಂ.ವೀರಪ್ಪಮೂಯ್ಲಿ, ಕಾಂಗ್ರೆಸ್ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್, ದಿನೇಶ್ ಗುಂಡೂರಾವ್, ಆರ್.ಧೃವನಾರಾಯಣ್ , ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ, ಕೃಷ್ಣ ಭೈರೇಗೌಡ, ಅಜಯ್ ಸಿಂಗ್, ಅಖಂಡ ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವರಿದ್ದರು.




