Friday, November 20, 2026

ಪ್ರಾಯೋಗಿಕ ಆವೃತ್ತಿ

ವಾಲ್ಮೀಕಿ ಅವರ ತತ್ವಗಳು ಜಗತ್ತಿಗೆ ಆದರ್ಶ: ಡಾ. ಹೆಚ್.ಎಲ್. ನಾಗರಾಜು

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಲ್ಲಿ ನೀಡಿರುವ ಸಂದೇಶಗಳು ಜಗತ್ತಿಗೆ ಆದರ್ಶ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ಗುರು ಒಂದು ಸಮುದಾಯಕ್ಕೆ ಇದ್ದರೆ ಆ ಸಮುದಾಯವನ್ನು ಅಭಿವೃದ್ದಿ ಪಡಿಸಲು ಮತ್ತು ಉತ್ತಮ ಮಾರ್ಗದರ್ಶನ ನೀಡಲು ಒಂದು ವೇದಿಕೆ ಸಿಗುತ್ತದೆ. ಹಕ್ಕುಗಳು, ಗುರಿಗಳು ಹಾಗೂ ಜವಾಬ್ದಾರಿಗಳನ್ನು ತಿಳಿಸಲು ಸಹಾಯವಾಗುತ್ತದೆ ಎಂದರು.

ಜಿ.ಪಂ.ಸಿಇಒ ಶಾಂತಾ ಎಲ್.ಹುಲ್ಮನಿರವರು ಮಾತನಾಡಿ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅಂತಹ ಮಹಾನ್ ಚೇತನರ ಜಯಂತಿಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಬಾರದು. ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಬೇಕು.

ಬದುಕಿನಲ್ಲಿ ಹೇಗೆ ಬದುಕಬೇಕು ಎಂಬುದಕ್ಕೆ ರಾಮಾಯಣ ಉದಾಹರಣೆಯಾದರೆ, ಬದುಕಿನಲ್ಲಿ ತಪ್ಪುಗಳನ್ನು ಮಾಡಬಾರದು ಎಂಬುದಕ್ಕೆ ಮಹಾಭಾರತ ಉದಾಹರಣೆಯಾಗುತ್ತದೆ ಎಂದರು.

ಹಿರಿಯ ದಂತ ವೈದ್ಯೆ ಡಾ.ಸುಗುಣರವರು ಮಾತನಾಡಿ,ರಾಮಾಯಣ ಮಹಾಕಾವ್ಯದಲ್ಲಿ, ವಾಲ್ಮೀಕಿ ಸಂಸ್ಕೃತದಲ್ಲಿ 24,000 ಶ್ಲೋಕಗಳು, 7 ಖಂಡಗಳು ಮತ್ತು ಅನೇಕ ಶ್ಲೋಕಗಳನ್ನು ಬರೆದಿದ್ದಾರೆ ಎಂದರು.


ಇದನ್ನೂ ಓದಿ:ಪರಿಶ್ರಮದಿಂದ ಸಾಧನೆ ಮಾಡುವುದು ಸಾಧ್ಯ ಎಂದು ತೋರಿಸಿದವರು ವಾಲ್ಮೀಕಿ


 

ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ರವರು ಬರೆದಿರುವ ರಾಮಾಯಣ ಮಹಾಕಾವ್ಯವು ಇಂದಿಗೂ ಸಹ ಮಾದರಿಯಾಗಿದೆ. ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ರಾಮಾಯಣ ಮಹಾಕಾವ್ಯ ಪ್ರೇರಣೆಯಾಗಿದೆ ಎಂದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರು ರಾಮಾಯಣದಂತಹ ಮಹಾಕಾವ್ಯ ಮತ್ತು ವಾಲ್ಮೀಕಿಯಂತಹ ಮಹಾಕವಿ ನಮಗೆ ದೊರೆತಿರುವುದು ಭುವನದ ಭಾಗ್ಯ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ, ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್,ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕರಾದ ಸ್ವಾಮಿಗೌಡ, ಮುಖಂಡರುಗಳಾದ ಪುಟ್ಟಸ್ವಾಮಿ ನಾಯಕ, ಚಂದ್ರನಾಯಕ, ಕೃಷ್ಣನಾಯಕ,ಟಿ ಕೃಷ್ಣಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ