ಕೆ.ಆರ್.ಎಸ್. ಅಣೆಕಟ್ಟೆಯ ನೀರಿನ ಮಟ್ಟ ಪ್ರಸ್ತುತ 122.32 ಅಡಿಗಳಿದ್ದು, ಒಟ್ಟು ಸಂಗ್ರಹಣಾ ಸಾಮರ್ಥ್ಯ 46.059 ಟಿ.ಎಂ.ಸಿ. ಇದ್ದು, +60 ಅಡಿಗಳ ಮೇಲೆ ಸಂಗ್ರಹಣಾ ಸಾಮರ್ಥ್ಯ 41.658 ಟಿ.ಎಂ.ಸಿ ನೀರು ಲಭ್ಯವಿದ್ದು, ಮುಂಗಾರು ಹಂಗಾಮಿಗೆ ಕೆ.ಆರ್.ಎಸ್ ಅಚ್ಚುಕಟ್ಟಿಗೆ ಆಗಸ್ಟ್ ತಿಂಗಳಿನಿಂದ ನವೆಂಬರ್ ಅಂತ್ಯದವರೆಗೆ ಕಟ್ಟು ಪದ್ದತಿಯಲ್ಲಿ ನೀರು ಬಿಡುಗಡೆ ಮಾಡುವುದಾಗಿ ಕೆ.ಆರ್.ಎಸ್ ಅಧೀಕ್ಷಕ ಇಂಜಿನಿಯರ್ ರಘುರಾಮನ್ ತಿಳಿಸಿದ್ದಾರೆ.
2018ರ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕಾಗಿದ್ದು, ಮುಂದಿನ ಬೇಸಿಗೆಯಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕಾಗಿರುವುದರಿಂದ ಹಾಗೂ ಬೇಸಿಗೆಯಲ್ಲಿ ಆರೆ ಖುಷಿ ಬೆಳೆಗಳನ್ನು ಬೆಳೆಯಲು ನಾಲೆಗಳಿಗೆ ನೀರನ್ನು ಹರಿಸಲು ಉದ್ದೇಶಿಸಿರುವುದರಿಂದ, ವಾಸ್ತವವಾಗಿ ಲಭ್ಯವಿರುವ ನೀರನ್ನು 18 ದಿನ ಹರಿಸಿ, 12 ದಿನ ನಿಲ್ಲಿಸುವ ಕಟ್ಟು ಪದ್ಧತಿ ಆಧಾರದ ಮೇಲೆ ಮುಂಗಾರು ಬೆಳೆಗಳಿಗೆ 5 ಕಟ್ಟು ನೀರನ್ನು ಹರಿಸಲು ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು 5 ಕಟ್ಟುಗಳು (On and Off) ಅಂದರೆ, ತಿಂಗಳಲ್ಲಿ 18 ದಿನ ನೀರನ್ನು ಹರಿಸಿ, ಉಳಿದ 12 ದಿನಗಳು ನೀರನ್ನು ನಿಲ್ಲಿಸುವ ಕಟ್ಟು ಪದ್ಧತಿಯನ್ನು ಅಳವಡಿಸಿಕೊಂಡು, ಮುಂಗಾರು ಬೆಳೆಗಳಿಗೆ ನೀರನ್ನು ನಾಲೆಗಳು ಮತ್ತು ಅಣೆಕಟ್ಟು ನಾಲೆಗಳ ಮೂಲಕ ಕಳೆದ ಆಗಸ್ಟ್ 1ರಿಂದಲೇ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಾಲೆಗಳಲ್ಲಿ ನೀರು ಹರಿಸುವ ವೇಳಾಪಟ್ಟಿ
01.08.2024 ರಿಂದ 16.08.2024 (18 ದಿನಗಳ ಕಾಲ ನೀರು ಹರಿಸುವುದು, 12 ದಿನ ನಿಲ್ಲಿಸುವುದು)
31.08.2024 ರಿಂದ 15.09.2024
30.09.2024 ರಿಂದ 15.10.2024
30.10.2024 ರಿಂದ 14.11.2024
29.11.2024 0 14.12.2024