Thursday, November 19, 2026

ಪ್ರಾಯೋಗಿಕ ಆವೃತ್ತಿ

ಜನರು ಕ್ಷೇಮವಾಗಿರಲು ನಿರಂತರ ಆರೋಗ್ಯ ಶಿಬಿರ: ಫೈಟರ್ ರವಿ

ನಾಗಮಂಗಲ ತಾಲ್ಲೂಕಿನ ಜನರು ಕ್ಷೇಮವಾಗಿರಲು ನಿರಂತರವಾಗಿ ಆರೋಗ್ಯ ಶಿಬಿರ ನಡೆಸಿಕೊಂಡು ಹೋಗುತ್ತೇನೆಂದು ಸಮಾಜ ಸೇವಕ ಫೈಟರ್ ರವಿ ಭರವಸೆ ನೀಡಿದರು.

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಎ.ಎಲ್.ಕೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಇಂದು ಬೃಹತ್ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಯಾವಾಗಲೋ ಒಮ್ಮೆ ಬಂದು ಆರೋಗ್ಯ ಶಿಬಿರ ಆಯೋಜಿಸಿ ಹೋಗುವುದಿಲ್ಲ. ನಿಮ್ಮೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವ ಕೆಲಸವನ್ನು ನಿರಂತರವಾಗಿ ಮಾಡುತ್ತೇನೆ. ನನ್ನ ಈ ಕೆಲಸಕ್ಕೆ ನಿಮ್ಮ ಸಹಕಾರವೂ ಸಹ ಬೇಕು. ತಾಲ್ಲೂಕಿನ ಜನರ ಸೇವೆಗಾಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಶಕ್ತಿಮೀರಿ ದುಡಿಯುತ್ತೇನೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಜೆ.ಕುಮಾರ್ ಮಾತನಾಡಿ, ಫೈಟರ್ ರವಿ ರವರು ಸಮುದಾಯವು ಶಾಶ್ವತವಾಗಿ ಬಳಕೆ ಮಾಡುವ ಸೌಲಭ್ಯಗಳನ್ನು ನೀಡಿದ್ದಾರೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ಸೇರಿದಂತೆ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಅವರು ಸ್ವಂತ ಹಣದಲ್ಲಿ ಸಮಾಜಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.


ಇದನ್ನು ಓದಿ:ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ


ಶಾಲೆಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿರುವ ರವಿಯವರ ಕೆಲಸವನ್ನು ಹಲವರು ಸಹಿಸದೆ ಅಡೆತಡೆ ನೀಡುತ್ತಿದ್ದಾರೆ. ಆದರೂ ಸಹ ಫೈಟರ್ ರವಿ ಅವರು ಎದೆಗುಂದದೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಆದಿಚುಂಚನಗಿರಿ ಆಸ್ಪತ್ರೆಯ ವೈ.ಪಿ.ಧರ್ಮೇಂದ್ರ ಮಾತನಾಡಿ, ಫೈಟರ್ ರವಿ ಅವರು ತಾಲ್ಲೂಕಿನ ಜನರಿಗಾಗಿ ಉಚಿತ ಆರೋಗ್ಯ ಶಿಬಿರ ಆಯೋಜಿಸುವ ಜೊತೆಯಲ್ಲಿ ಅವಶ್ಯಕತೆ ಇರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಸೇರಿದಂತೆ ಔಷಧಗಳನ್ನು ಪೂರೈಸುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ. ತಾಲ್ಲೂಕಿನ ಜನರ ಆರೋಗ್ಯವನ್ನು ಕಾಪಾಡಲು ತಜ್ಞ ವೈದ್ಯರನ್ನು ನಿಮ್ಮ ಮನೆಯ ಬಾಗಿಲಿಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡುವ ಕೆಲಸ ಮಾಡಿದ್ದಾರೆ. ಆದ್ದರಿಂದ ತಾಲ್ಲೂಕಿನ ಜನರು ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಡದೇ ತಪಾಸಣೆ ಮಾಡಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಿ ಎಂದರು.

ಆರೋಗ್ಯ ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದಲ್ಲಿ 2620 ನೋಂದಣಿಯಾಗಿದ್ದು, 656 ಜನರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೇ ಆರೋಗ್ಯ ಶಿಬಿರದಲ್ಲಿ ಹೃದಯ, ನರರೋಗ, ಮೂತ್ರಪಿಂಡ, ಚರ್ಮ ರೋಗ, ಮಾನಸಿಕ ರೋಗ ಮತ್ತು ಸಮುದಾಯ ಆರೋಗ್ಯ ಪರೀಕ್ಷೆ ನಡೆಸಿ ಉಚಿತ ಔಷಧ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಬಿಜಿಎಸ್ ಆಸ್ಪತ್ರೆಯ ಆರ್. ಎಂ.ಓ ಡಾ. ಸೋಮಶೇಖರ್, ಡಾ. ರಾಧಾ, ನಾರಾಯಣ ಆಸ್ಪತ್ರೆ ಡಾ.ಸುರೇಶ್, ಕ್ಯಾನ್ಸರ್ ಆಸ್ಪತ್ರೆ ಬೆಂಗಳೂರು ಡಾ.ಪ್ರತಿಮಾ, ಮುಖಂಡರಾದ ಕರಡಳ್ಳಿ ಸತೀಶ್ ಎ.ಎನ್, ಪವನ್, ಅರ್ಜುನ್, ಸೋಮ ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ