ನಾಗಮಂಗಲ ತಾಲ್ಲೂಕು ಸೇರಿದಂತೆ ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ ಹಲವು ವಾಹನಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ನಾಗಮಂಗಲ ಬೆಳ್ಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕನ್ನಮಂಗಲ ಸೀಗೆಹಳ್ಳಿಯ ಸೂರ್ಯ ಅಲಿಯಾ ಸೈಕೋ ಸೂರಿ, ಹರೀಶ್ ಅಲಿಯಾಸ್ ಚಂದನ್ ನಾಯಂಡಹಳ್ಳಿ, ಗೌತಮ್ ಅಲಿಯಾಸ್ ಗೌತು ಅಲಿಯಾಸ್ ಕ್ಯಾಟ್ ಗೊಲ್ಲರಹಳ್ಳಿ, ಪ್ರದೀಪ್ ಕನ್ನಮಂಗಲ ಬೆಂಗಳೂರು ಬಂಧಿತ ಆರೋಪಿಗಳು.
ಈ ಆರೋಪಿಗಳು ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಬುಲೆರೋ ವಾಹನ, ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ಸಾವಿರ ರೂ. ಮೌಲ್ಯದ ಮೇಕೆಗಳ ಕಳವು, ಬೆಂಗಳೂರು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಓಮ್ನಿ ಕಾರು ಹಾಗೂ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಟಾಟಾ ಏಸ್ ಗೂಡ್ಸ್ ವಾಹನವನ್ನು ಕಳ್ಳತನ ಮಾಡಿದ್ದರು. ಇವುಗಳ ಒಟ್ಟು ಮೌಲ್ಯ 7.20 ಲಕ್ಷ ರೂ.(ಏಳು ಲಕ್ಷದ ಇಪ್ಪತ್ತು ಸಾವಿರ ರೂ.) ಎಂದು ಅಂದಾಜಿಸಲಾಗಿದೆ.
ಕಳೆದ ಜು.31ರಂದು 2022 ರಂದು ಕನ್ನೇಗೌಡ ಎಂಬುವವರು ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ಬೆಳ್ಳೂರು ಕ್ಲಾಸ್ನಲ್ಲಿರುವ ಶ್ರೀಕಂಠೇಗೌಡ ಅವರ ಬಾಡಿಗೆ ಮನೆಯ ಮುಂಭಾಗ ನಿಲ್ಲಿಸಿದ್ದ ಅವರ ಬುಲೆರೋ ಮ್ಯಾಕ್ಸಿ ದಿ ಲೈಫ್ ವಾಹನವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ನೀಡಿದ ದೂರಿನ ಮೇರೆಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು,
ಠಾಣೆಯ ಪಿ.ಎಸ್.ಐ ಲೋಕೇಶ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ರಚಿಸಿ ಎಲ್ಲಾ ಕಳ್ಳರನ್ನು ಬಂಧಿಸಲಾಗಿದೆ.




