ದಿನಾಂಕ :15/10/2022 ರಂದು ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿರುವ ಕಾಳೇಗೌಡ ಸ್ಕೂಲ್ ಮುಂಭಾಗದಲ್ಲಿರುವ ಧನ್ವಂತರಿ ಮೆಡಿಕಲ್ಸ್ ಹಿಂಭಾಗ ಸಂಜೆ 4:30 ರಿಂದ ರಾತ್ರಿ 8:00 ಗಂಟೆ ವರೆಗೆ ನರರೋಗ ತಪಾಸಣಾ ಶಿಬಿರ ನಡೆಯಲಿದೆ.
ಜೆಎಸ್ಎಸ್ ಆಸ್ಪತ್ರೆಯ ಖ್ಯಾತ ನರರೋಗ ತಜ್ಞ ವೈದ್ಯರಾದ ಡಾ. ಎಸ್.ಸಿ. ನೇಮಿಚಂದ್ರ ಸದರಿ ಶಿಬಿರದಲ್ಲಿ ಭಾಗವಹಿಸುತ್ತಾರೆ.
ತಲೆನೋವು, ಮೈಗ್ರೇನ್, ಬೆನ್ನು ನೋವು, ಮರೆವು,ಮೂರ್ಛೆ ರೋಗ, ಪಾರ್ಶ್ವವಾಯು, ನರರೋಗ,ಕುತ್ತಿಗೆ ಹಿಂಭಾಗ ನೋವು ಇರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ
9448101081, 9380759918 ಸಂಪರ್ಕಿಸಬಹುದು.




