ವರದಿ : ನ.ಲಿ.ಕೃಷ್ಣ
-
ಸಂಚಾರಿ ಪೊಲೀಸರ ನಿರ್ವಹಣೆ ಕೊರತೆ
- ಟ್ರಾಪಿಕ್ ನಲ್ಲಿ ಸಿಲುಕಿ ನರಳಿದ ಜನ
ಮಂಡ್ಯ ತಾಲ್ಲೂಕಿನ ಬೂದನೂರು ಕೆರೆ ಏರಿ ಒಡೆದ ಪರಿಣಾಮ ಶನಿವಾರ ಮಧ್ಯಾಹ್ನದ ನಂತರ ಬೆಂಗಳೂರು-ಮೈಸೂರು ಹೆದ್ಧಾರಿಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿ ವಾಹನ ಸವಾರರು ಪರದಾಡುವಂತಾಯಿತು.
ಸಂಚಾರ ನಿಯಂತ್ರಣ ಆಗಮಿಸಿದ್ದ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಪೊಲೀಸರು ಅಲ್ಲಿನ ದಟ್ಟಣೆಯನ್ನು ನಿಯಂತ್ರಿಸಲಾಗದೆ ಹೈರಾಣಾದರು. ಮಂಡ್ಯ ಮತ್ತು ಮದ್ದೂರು ಕಡೆಯಿಂದ ಯಾವ ಟ್ಯ್ರಾಕ್ ನಲ್ಲಿ ವಾಹನ ಸಂಚರಿಸಬೇಕೆಂಬ ನಿರ್ದೇಶನ ಕೊಡದ ಕಾರಣ ಇಂತಹ ಗೊಂದಲ ಉಂಟಾಯಿತು.
ಸರಿಯಾದ ಮಾರ್ಗದರ್ಶನ ಇಲ್ಲದೆ, ಅವರವರೇ ತಮಗೆ ತೋಚಿದ ಹಾಗೇ ಯಾರೋ ತೋರಿದ ಹಾಗೇ ಅಡ್ಡಾದಿಡ್ಡಿ ವಾಹನ ತಿರುಗಿಸಿದ ಪ್ರಯಾಣಿಕರಿಂದಾಗಿ ಒಂದು ಘಂಟೆಗೂ ಹೆಚ್ಚು ಕಾಲ ಟ್ರಾಪಿಕ್ ಜಾಮ್ ಆಯಿತು. ಪೊಲೀಸರು ಬೂದನೂರು ಬಳಿ ಒಬ್ಬಿಬ್ಬರು ಇದ್ದರು, ಇದರಿಂದ ಎರಡು ದಿಕ್ಕಿನಲ್ಲಿ ನಿರ್ದೇಶನ ಕೊಡಲು ಅಗತ್ಯ ಸಿಬ್ಬಂದಿ ಇಲ್ಲದೆ ಪ್ರಯಾಣಿಕರು ಪರದಾಡಿದರು.
ಟ್ರಾಫಿಕ್ ನಲ್ಲಿ ಸಿಲುಕಿನ ಅಂಬುಲೆನ್ಸ್
ಮಂಡ್ಯ ಆಸ್ಪತ್ರೆ ಯಿಂದ ಹೊರಟ ಅಂಬುಲೆನ್ಸ್ ಕೂಡ ಟ್ರಾಪಿಕ್ ನಲ್ಲಿ ಸಿಲುಕಿ ಹಿಂದಕ್ಕೆ ತಿರುಗಿ ಆಸ್ಪತ್ರೆಗೆ ಹೊಗುವ ಪ್ರಯತ್ನ ಮಾಡಿ, ಮತ್ತೆ ಹಿಂದಕ್ಕೆ ತಿರುಗಿ ಮೈಸೂರು ಕಡೆ ತಿರಗಲು ಅರ್ಧ ಗಟೆಗೂ ಹೆಚ್ಚು ಕಾಲ ಹಿಡಿಯಿತು.
ಹೀಗಾದರೆ ರೋಗಿಗಳ ಕಥೆ ಏನು ? ಪೊಲೀಸರು ಸರಿಯಾದ ಕ್ರಮ ವಹಿಸಲ್ಲವೇಕೆ ? ಎಂದು ಜನರು, ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಲೇ, ತಮ್ಮ ಬಂಧು ಬಳಗದವರಿಗೆ ಕರೆ ಮಾಡಿ ಪರಿಸ್ಥಿತ ವಿವರಿಸುತ್ತಾ ಪೇಚಾಡುತ್ತಿದ್ದರು.
ಪ್ರತಿ ಭಾರಿ ಇದೇ ಸಮಸ್ಯೆ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ಭಾರಿ ಮಳೆ ಬಂದಾಗಲೂ ಒಡೆಯುವ ಬೂದನೂರು ಕೆರೆಯಿಂದಾಗಿ ಜನರು ಪರದಾಡುವಂತಾಗಿದೆ.
ಬದಲಿ ರಸ್ತೆಯಲ್ಲಿ ಹೊಗೋಣ ಎಂದರೆ ಮದ್ದೂರು ಕೆ.ಎಂ.ದೊಡ್ಡಿ ಮಾರ್ಗ ಕೂಡ ಮಳೆ ನೀರಿಗೆ ಬಂದ್ ಆಗಿದ್ದರಿಂದ ಈ ಹೆದ್ದಾರಿಯ ಪ್ರಯಾಣ ಅಪಾಯಕಾರಿಯಾಗಿ ಜನರಿಗೆ ಸಿಟ್ಟುತರಿಸಿದೆ.
ಈ ಹಿಂದೆ ಒಡೆದಿದ್ದ ಕೆರೆ ಏರಿ ಸರಿಪಡಿಸಲು ಸಾಕಷ್ಠು ಸಮಯ ಇದ್ದರೂ ಸರಿಪಡಿಸದ ನೀರಾವರಿ ಇಲಾಖೆ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಜನರು ಹಿಡಿ ಶಾಪ ಹಾಕಿದರು.




