Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಂತ್ರಸ್ತ ಬಾಲಕಿಯ ಪರ ವಕೀಲ ಬಿ.ಟಿ.ವಿಶ್ವನಾಥ್ ವಕಾಲತ್ತು

ಮಳವಳ್ಳಿ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಬಾಲಕಿಯ ಪೋಷಕ ದೂರುದಾರರ ಪರ ಪ್ರಗತಿ ಪರ ವಕೀಲ ಬಿ.ಟಿ.ವಿಶ್ವನಾಥ್ ಮಂಡ್ಯದ ತ್ವರಿತಗತಿ ನ್ಯಾಯಾಲಯ(2) ದಲ್ಲಿ ಇಂದು ವಕಾಲತ್ತು ಸಲ್ಲಿಸಿದರು.

ಸೆಕ್ಷನ್ 301(2) ರ ಪ್ರಕಾರ ಸರ್ಕಾರಿ ಅಭಿಯೋಜಕರ ನೆರವಿಗೆ ಮತ್ತೊಬ್ಬ ವಕೀಲರು ವಕಾಲತ್ತು ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡುತ್ತದೆ. ಅದರಂತೆ ನಾನು ಸಂತ್ರಸ್ತ ಬಾಲಕಿಯ ಪೋಷಕ ದೂರುದಾರರ ಪರ ಇಂದು ವಕಾಲತ್ತು ಅರ್ಜಿ ಸಲ್ಲಿಸಿದ್ದೇನೆ.ಈ ಅರ್ಜಿಯ ಬಗ್ಗೆ ನ್ಯಾಯಾಲಯ ಅ.17 ರಂದು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ವಕೀಲ ಬಿ.ಟಿ.ವಿಶ್ವನಾಥ್ ನುಡಿ ಕರ್ನಾಟಕ. ಕಾಮ್ ಗೆ ತಿಳಿಸಿದರು.

ಸರ್ಕಾರಿ ಅಭಿಯೋಜಕರ ನೆರವಿಗೆ ಮತ್ತೊಬ್ಬ ವಕೀಲ ಇರಲಿ ಎಂದು ಸಂತ್ರಸ್ತ ಬಾಲಕಿಯ ಪೋಷಕರು ನನ್ನ ಪರವಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದರೆ ನ್ಯಾಯಾಲಯ ನನ್ನನ್ನು ನೇಮಕ ಮಾಡಲಿದೆ. ನ್ಯಾಯಾಲಯ ನನ್ನ ನೇಮಕ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ