ಸಕ್ಕರೆ ಮಂತ್ರಿ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರೈತಪ್ರತಿನಿಧಿಗಳ ಜೊತೆಗಿನ ಪ್ರಸಕ್ತ ಸಾಲಿನ ಕಬ್ಬು ದರ ನಿಗಧಿಮಾಡಲು ಕರೆದಿದ್ದ ಸಭೆ ವಿಫಲವಾಗಿದೆ.
ರೈತ ಪ್ರತಿನಿಧಿಗಳು ಟನ್ ಕಬ್ಬಿಗೆ 5500/-ನೀಡುವಂತೆ ಸಭೆಯಲ್ಲಿ ಪಟ್ಟುಹಿಡಿದ ಕಾರಣ ಸಚಿವರು ಸಭೆಯನ್ನು ಮುಕ್ತಾಯಗೊಳಿಸಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ ಕರೆಯುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ರೈತನಾಯಕರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಸುನಂದಾ ಜಯರಾಮ್ ಮುಂತಾದವರು ಭಾಗವಹಿಸಿದ್ದರು.




