Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರೀ ಮಳೆ: ಮನೆ ಕುಸಿತ

ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ಮಂಡ್ಯ ನಗರದ ಲೇಬರ್ ಕಾಲೋನಿ 6ನೇ ಕ್ರಾಸ್ ನಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಲೇಬರ್ ಕಾಲೋನಿಯ ನಿವಾಸಿ ಪ್ರಸನ್ನ ನಾಯಕ್ ಎಂಬುವರ ಹೆಂಚಿನ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಹೆಂಚುಗಳೆಲ್ಲ ಉದುರಿ ಬಿದ್ದು,ಮನೆಯಲ್ಲಿದ್ದ ಆಹಾರ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದೆ.

ಇಂದು ಬೆಳಗಿನ ಜಾವ 3.30 ರ ಸುಮಾರಿಗೆ ಮನೆ ಕುಸಿಯುತ್ತಿರುವ ಶಬ್ಧ ಕೇಳಿ ನಾವೆಲ್ಲಾ ಮನೆಯಿಂದ ಹೊರಗೆ ಬಂದೆವು ಎಂದು ಮನೆಯ ಮಾಲೀಕರು ತಿಳಿಸಿದರು.

ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿ ಮಲಗಿದ್ದ ನಾವು ಮೂರು ಮಂದಿ ಹೊರಗೆ ಬಂದು ಜೀವ ಉಳಿಸಿಕೊಂಡಿದ್ದೇವೆ. ಮನೆಯಲ್ಲಿದ್ದ ದಿನಸಿ ಸಾಮಾನುಗಳು,ಗೃಹೋಪಯೋಗಿ ಪರಿಕರಗಳು ಎಲ್ಲವೂ ನಾಶವಾಗಿದ್ದು, ನಾಳೆಯಿಂದ ಎಲ್ಲಿ ಇರುವುದೋ ಎಂಬ ಆತಂಕ ಕಾಡುತ್ತಿದೆ. ನಮಗೆ ಬದುಕಲು ಮನೆ ಮಾಡಿ ಕೊಡಬೇಕೆಂದು ಮನೆ ಮಾಲೀಕರು ಆಗ್ರಹಿಸಿದರು.

ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!