ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿರುವ ವಿಚಾರವಾಗೆ ನಾಳೆ ಸೋಮವಾರದಂದು ಪ್ರಜ್ಙಾವಂತರ ವೇದಿಕೆ, ಶ್ರೀರಂಗಪಟ್ಟಣ ಘಟಕದಿಂದ ಪ್ರತಿಭಟನೆ ನಡೆಯಲಿದೆ.
ಕೇಂದ್ರ ಸರಕಾರವು ಟಿಪ್ಪು ಎಕ್ಸ್‌ಪ್ರೆಸ್” ಉಗಿಬಂಡಿಯ ಹೆಸರು ಬದಲಾಯಿಸಿರುವ ವಿಚಾರವಾಗಿ ವಿರೋಧಿಸುತ್ತ, ಶಾಂತಿಯುತ ಪ್ರತಿಭಟನೆಯನ್ನು ಪ್ರಜ್ಞಾವಂತರ ವೇದಿಕೆ ಜೊತೆ ರೈತ-ದಲಿತ ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳು ಸೇರಿ ದಿನಾಂಕ 17ರ ಸೋಮವಾರದಂದು ಮಧ್ಯಹ್ನಾ 12:00ರ ಸಮಯಕ್ಕೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಪ್ರತಿಭಟನೆಯು ಶ್ರೀರಂಗಪಟ್ಟಣದ ಟೌನ್ ಟಿಪ್ಪು ಸುಲ್ತಾನ್‌ರವರ ಮೃತ ಸ್ಥಳದಿಂದ ತಾಲ್ಲೋಕು ಕಚೇರಿಯವರೆಗೆ ಪಾದಯಾತ್ರೆ ಮೂಲಕ ತಲುಪಿ ಮನವಿಯನ್ನು ಸಲ್ಲಿಸಲಾಗುವುದು ಎಂದು ಪ್ರಜ್ಙಾವಂತರ ವೇದಿಕೆಯ ಸಿ. ಎಸ್. ವೆಂಕಟೆಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




