Thursday, November 19, 2026

ಪ್ರಾಯೋಗಿಕ ಆವೃತ್ತಿ

ಡಿಸಿ ಕಚೇರಿ ಗೇಟ್ ಮುರಿದು ಒಳ ನುಗ್ಗಿದ ಬೀಡಿ ಕಾಲೋನಿ ನಿವಾಸಿಗಳು

ಸತತ ಮಳೆಗೆ ಬೀಡಿ ಕಾರ್ಮಿಕರ ಕಾಲೋನಿ ಪದೇ ಪದೇ ಜಲಾವೃತವಾಗುತ್ತಿರುವ ಹಿನ್ನೆಲೆಯಲ್ಲಿ ರೋಸಿ ಹೋದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಗೇಟ್ ಮುರಿದು ಒಳಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಬಾರಿ ಮಳೆ ಬಂದಾಗಲೂ ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣವಾಗಿ ಜಲಾವೃತವಾಗುತ್ತದೆ. ಇದಕ್ಕೆ ಸರ್ಕಾರ ಶಾಶ್ವತ ಪರಿಹಾರ ನೀಡದೆ ಕಾಟಾಚಾರಕ್ಕೆ ಹತ್ತು ಸಾವಿರ ಹಣ ನೀಡಿ ಕೈ ತೊಳೆದುಕೊಳ್ಳುತ್ತದೆ. ಮತ್ತೆ ಮಳೆ ಬಂದಾಗ ಇದೇ ಪರಿಸ್ಥಿತಿ ಉದ್ಭವಾಗುತ್ತದೆ. ಇದರಿಂದ ನಾವು ಅಲ್ಲಿ ಬದುಕಲು ಸಾಧ್ಯವಿಲ್ಲದ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಶಾಶ್ವತ ಪರಿಹಾರ ನೀಡಬೇಕೆಂದು ನಿವಾಸಿಗಳು ಪ್ರತಿಭಟನೆ ನಡೆಸಿದರು.

ನಿನ್ನೆಯು ಮಳೆಗೆ ಬೀಡಿಕಾಲೋನಿ ಜಲಾವೃತವಾಗಿದೆ. ಮಳೆ ಅವಾಂತರದಿಂದ ಜನರು ಮಕ್ಕಳನ್ನು ಕರೆದುಕೊಂಡು ಮನೆ ಖಾಲಿ ಮಾಡಿದ್ದಾರೆ. ಇದರಿಂದ ನಮಗೆ ತುಂಬಾ ಕಷ್ಷವಾಗಿದೆ. ಈ ಸರ್ಕಾರಗಳು ನಮ್ಮನ್ನು ಮನುಷ್ಯರೆಂದು ಪರಿಗಣಿಸಿಲ್ಲ. ಪ್ರಾಣಿಗಳಿಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಈಗಿರುವ ಸರ್ಕಾರ ನಮಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಪಟ್ಟು ಹಿಡಿದು ಜಿಲ್ಲಾಧಿಕಾರಿ ಅಶ್ವತಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಬೀಡಿ ಕಾಲೋನಿ ನಿವಾಸಿಗಳು ಸಿಟ್ಟಿಗೆದ್ದು ಪ್ರತಿಭಟನೆ ತೀವ್ರಗೊಳಿಸಿ ಅಧಿಕಾರಿಗಳು ನಮಗೆ ಸರಿಯಾದ ನ್ಯಾಯ ಕೊಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶಗೊಂಡಾಗ ಪೊಲೀಸರು ತಡೆದರು. ಆದರೂ ಪಟ್ಟು ಬಿಡದೇ ಜಿಲ್ಲಾಧಿಕಾರಿ ಕಚೇರಿ ಗೇಟ್ ಮುರಿದು ಒಳ ನುಗ್ಗಲು ಯತ್ತಿಸಿದರು‌, ಪೋಲಿಸರು ಒಳಗಿನಿಂದ ಗೇಟ್ ಮುಚ್ಚಿದರೂ ನಿವಾಸಿಗಳು ಆಕ್ರೋಶದಿಂದ
ಡಿಸಿ ಕಚೇರಿ ಗೇಟ್ ಮುರಿದು ಹಾಕಿ ಒಳಗೆ ಹೋಗಿ ಪ್ರತಿಭಟನೆಗೆ ಕುಳಿತರು.

ಸ್ಥಳಕ್ಕೆ ಡಿಸಿ ಬರುವಂತೆ ನಿವಾಸಿಗಳ ಪಟ್ಟು ಹಿಡಿದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಊಟ ಮಾಡಿ ಧರಣಿ ಮುಂದುವರಿಸಿದ್ದಾರೆ. ಸ್ಥಳದಲ್ಲಿ ಪೋಲಿಸರಿಗೂ ಬೀಡಿ ಕಾಲೋನಿ ನಿವಾಸಿಗಳಿಗೂ ನೂಕಾಟ ತಳ್ಳಾಟ ನಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ  ಹೆಚ್.ಸಿ.ಮಧುಚಂದನ್, ಪಿ.ಡಿ.ರಮೇಶ್, ನಗರಸಭಾ ಸದಸ್ಯರಾದ ಜಾಕೀರ್ ಪಾಷಾ ಹಾಗೂ ನಯೀಂ ನೇತೃತ್ವವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ