Thursday, November 19, 2026

ಪ್ರಾಯೋಗಿಕ ಆವೃತ್ತಿ

ದೇವಾಲಯಗಳು ಸಂಸ್ಕಾರ ಕೇಂದ್ರಗಳಾಗಲಿ – ಸ್ವಾಮೀಜಿ

ದೇವಾಲಯಗಳು ಮಕ್ಕಳಿಗೆ ಸಂಸ್ಕಾರ ಕೇಂದ್ರಗಳಾಗಬೇಕಿದೆ, ಬೆಳಿಗ್ಗೆ ಎದ್ದು ಶುಚಿಗೊಂಡು, ದೇವತಾ ಪ್ರಾರ್ಥನೆ ಮಾಡುವುದು, ಶುಭಕಾರ್ಯಗಳಿಗೆ ತೆರಳುವಾಗ ಪೂಜೆ ಪುರಸ್ಕಾರ ಮಾಡಿ ಸ್ಮರಿಸುವುದು ಸೂಕ್ತ, ಮಕ್ಕಳಿಗೆ ಸಂಸ್ಕಾರ ಕೊಡುವುದು ಅವಶ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖಾಮಠದ ಕಾರ್ಯದರ್ಶಿ ಸೋಮನಾಥ ಸ್ವಾಮೀಜಿ ಹೇಳಿದರು.

ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರತಿಷ್ಠಾಪನೆ ಹಾಗೂ ಮಾರಮ್ಮ ದೇವಾಲಯ ಸಂಪ್ರೋಕ್ಷಣ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರತಿ ಗ್ರಾಮಗಳಲ್ಲಿ ಗ್ರಾಮದೇವತೆ, ಆರಾಧನಾ ದೇವಾಲಯಗಳು ಇವೆ, ಪೂರ್ವಿಕರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕಿದೆ, ಜಗದ್ಗುರು ಶ್ರೀಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು, ಹಳ್ಳಿ ಹಳ್ಳಿಗಳನ್ನು ಸುತ್ತಿ ಭಕ್ತರನ್ನು ಭೇಟಿ ಮಾಡಿದ್ದಾರೆ, ಆಶೀರ್ವವನ ನೀಡಿದ್ದಾರೆ ಎಂದು ಸ್ಮರಿಸಿದರು.

ಮಾನವ ಹುಟ್ಟುತ್ತಾನೆ-ಒಂದು ದಿನ ಸಾಯುತ್ತಾನೆ, ಇದಷ್ಟೇ ಅಲ್ಲ ಜೀವನ, ಕೇವಲ ಹೊಟ್ಟೆ ತುಂಬಿಸಿಕೊಳ್ಳಲಿಕ್ಕಾಗಿ ಜೀವನ ಮಾಡಿದರೆ, ಅದು ಪ್ರಾಣಿಗಳ ಬದುಕಾಗುತ್ತದೆ, ಹೃದಯವನ್ನು ತುಂಬಿಕೊಳ್ಳಲಿಕ್ಕಾಗಿ ಭಗವಂತ ದಾರಿ ತೋರಿದ್ದಾನೆ, ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ಎಂದರೆ ಪವಿತ್ರದೇವಾತ ಕಾರ್ಯಗಳನ್ನು ಮಾಡುವುದು ಎಂದು ನುಡಿದರು.

ಶಾಸಕ ಎಂ ಶ್ರೀನಿವಾಸ್ ಸಮಾರಂಭ ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಮತ್ತು ದಾನಿಗಳನ್ನು ಗಣ್ಯರು ಅಭಿನಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಕೆರೆಯಂಗಳದಿಂದ ಸಾರೋಟು ವಾಹನದಲ್ಲಿ ಗಣ್ಯರನ್ನು ಕುಂಭಮೇಳ ಮತ್ತು ನಾದಸ್ವರಮೇಳದೊಂದಿಗೆ ಮರವಣಿಗೆ ಮಾಡಿ ದೇವಾಲಯದವರೆಗೂ ಕರೆತರಲಾಯಿತು. ಬಳಿಕ ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಜೆ ಮಹೇಶ್, ಪಿಡಿಓ ಶ್ರೀಧರ್, ಧರ್ಮಸ್ಥಳ  ಸಂಸ್ಥೆಯ ಯೋಜನಾಧಿಕಾರಿ ಅಶೋಕ್, ಮುಖಂಡರಾದ ಕೆ.ಕೆ.ರಾಧಾಕೃಷ್ಣ, ನಾಗರಾಜ್, ತಮ್ಮಣ್ಣ, ಜಿ.ಕೆ ಮಹೇಂದ್ರ, ಕೌಶಿಕ್, ಶಶಿಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಸವಿತಾಸತೀಶ್, ಅಜಯ್‌ಕುಮಾರ್, ಅರ್ಜುನ್ ಪಟೇಲ್ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ