Friday, November 20, 2026

ಪ್ರಾಯೋಗಿಕ ಆವೃತ್ತಿ

ಪೋಲೀಸರು ಕರ್ತವ್ಯ ನಿಷ್ಠೆ ಮತ್ತು ಶಿಸ್ತಿನಿಂದಲೂ ಇರುತ್ತಾರೆ: ಎಸ್.ಪಿ ಯತೀಶ್

ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೊಲೀಸರನ್ನು ತೋರಿಸಿರುವುದನ್ನು ನೀವುಗಳು ಅನುಭವಕ್ಕೆ ತೆಗೆದುಕೊಂಡು ಪೊಲೀಸರ ಬಗ್ಗೆ ತಪ್ಪು ತಿಳುವಳಿಕೆ ಹೊಂದಿರುತ್ತೀರಿ. ಪೋಲೀಸರು ಕರ್ತವ್ಯ ನಿಷ್ಠೆ ಮತ್ತು ಶಿಸ್ತಿನಿಂದಲೂ ಇರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಕಾಲೇಜಿನ (ಕಲ್ಲು ಕಟ್ಟಡ) ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಕಾರದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ ವಯಸ್ಸಿನಲ್ಲಿಯೇ ಪೊಲೀಸ್ ಇಲಾಖೆಯ ವಾಸ್ತವ ಸ್ಥಿತಿಯನ್ನು ತಿಳಿಸುವುದಾಗಿದೆ. ಹಾಗೆಯೇ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲೇಬೇಕಾದ ಕ್ರಮಗಳ ಬಗ್ಗೆ ನಿಮಗೆ ತಿಳಿಸಲು ಈ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.

ನೀವುಗಳು ರಾಷ್ಟ್ರದ ಪ್ರಜೆಗಳಾಗುತ್ತೀರಿ, ನಿಮ್ಮಲ್ಲಿಯೂ ಸಹ ಶಿಸ್ತನ್ನು ಮೂಡಿಸಲು ಅಪರಾಧಗಳನ್ನು ತಡೆಯಲು ನೀವುಗಳು ಸಹ ಸಮಾಜಕ್ಕೆ ಸಹಕಾರಿಯಾಗಲು ಇಂತಹ ಕಾರ್ಯಕ್ರಮ ಅನುಕೂಲವಾಗಿದೆ. ಹೇಗೆ ಪೊಲೀಸ್ ಇಲಾಖೆ ಪೆರೇಡ್ ಮಾಡುವ ಹಾಗೆ ಡ್ರಿಲ್ ಮಾಡುತ್ತಾರೆ, ಸಂಚಾರ ದಟ್ಟಣೆ ಹೇಗೆ ಕಡಿಮೆ ಮಾಡುತ್ತೀವಿ, ಅಪರಾಧ ಹೇಗೆ ನಿಯಂತ್ರಿಸುತ್ತೀವಿ ಎಂಬುದನ್ನು ನಿಮ್ಮ ಗಮನಕ್ಕೆ ತರಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಶಿವಮೂರ್ತಿ, ಡಿಡಿಪಿಐ ಎಸ್.ಟಿ. ಜವರೇಗೌಡ, ಪ್ರಾಂಶುಪಾಲ ತಮ್ಮೇಗೌಡ, ಸಿಪಿಐ ಸಂತೋಷ್ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ