ಕಾರ್ಮಿಕರ ಬದುಕಿನ ಬಗ್ಗೆ, ಸಂಕಷ್ಟಗಳ ಬಗ್ಗೆ ಚೆನ್ನಾಗಿ ಅರಿತಿದ್ದ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ಕಾರ್ಮಿಕ ಸಚಿವರಾಗಿ ನೀಡಿದ ಯೋಜನೆಗಳು ಕಾರ್ಮಿಕರ ಹಿತ ಕಾಯುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ ಜಿಲ್ಲಾಧ್ಯಕ್ಷ ರಾಮಕೃಷ್ಣ ಹೇಳಿದರು.
ಮಂಡ್ಯ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಕಾರ್ಮಿಕ ವಿಭಾಗ ಆಯೋಜಿಸಿದ್ದ ಕಾಂಗ್ರೆಸ್ ನಡಿಗೆ ಕಾರ್ಮಿಕರ ಕಡೆಗೆ ಘೋಷವಾಕ್ಯದೊಂದಿಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಂಭ್ರಮ ಮತ್ತು ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಆರ್ಥಿಕತಜ್ಞ ಮನಮೋಹನ್‌ಸಿಂಗ್ ಅವರ ಪ್ರಧಾನಮಂತ್ರಿ ಸಚಿವ ಸಂಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದ ಅವಧಿಯಲ್ಲಿ ನೀಡಿದ ಕಾರ್ಮಿಕ ನೀತಿಗಳು ಮತ್ತು ಯೋಜನೆಗಳು ಜನಪ್ರಿಯವಾಗಿವೆ. ಇಂತಹ ಮಹನೀಯರು ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾರ್ಮಿಕ ವಿಭಾಗ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಕಲ್ಪಮಾಡಿದೆ.ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮ ಆಯೋಜಿಸಿ, ಕಾಂಗ್ರೆಸ್ ನಡಿಗೆ ಕಾರ್ಮಿಕರ ಕಡೆಗೆ ಘೋಷವಾಕ್ಯದಲ್ಲಿ ಸಂಘಟಿಸಲಾಗುವುದು ಎಂದು ತಿಳಿಸಿದರು.
ಮಂಡ್ಯ ಜಿಲ್ಲಾ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯಾಯ ಸ್ಥಳೀಯ ಕಾರ್ಮಿಕರನ್ನು ಸಂಘಟಿಸಿ, ಪಕ್ಷ ಬಲವರ್ಧನೆಗೆ ಜಾಗೃತಿ ಮೂಡಿಸಿ ಶಕ್ತಿ ತುಂಬುವ ಕಾರ್ಯ ಮಾಡಲು ಪಾದಯಾತ್ರೆ ಆಯೋಜಿಸಿಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಪ್ರಧಾನಕಾರ್ಯದರ್ಶಿ ಟಿ.ಕೃಷ್ಣ ಆಟೋ, ರಾಜ್ಯ ಜಂಟಿಕಾರ್ಯದರ್ಶಿ ಕರಿಯಪ್ಪಚಾರ್, ನಗರ ಅಧ್ಯಕ್ಷ ಶಿವರುದ್ರ, ಜಿಲ್ಲಾ ವಕ್ತಾರ ಯೋಗೇಶ್, ಚಿಕ್ಕಮಂಡ್ಯಗೀತಮ್ಮ, ಸಮಿನಾಬಾಬು, ವಿಜಯಮ್ಮ ಗುತ್ತಲು, ಕಿಜರ್‌ಅಹಮದ್ ಪಾಷ, ಸಿದ್ದರಾಮೇಗೌಡ, ಶಿವಲಿಂಗಯ್ಯ, ಸುಂಡಳ್ಳಿ ಮಂಜುನಾಥ್ ಮತ್ತಿತರರಿದ್ದರು.




