Saturday, May 18, 2024

ಪ್ರಾಯೋಗಿಕ ಆವೃತ್ತಿ

ಟಿ20 ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಪಾಕ್ ವಿರುದ್ಧ ರೋಚಕ ಗೆಲುವು

ಟಿ20 ವಿಶ್ವಕಪ್ ಕ್ರಿಕೆಟ್‌ನ ಭಾರತ ಪಾಕಿಸ್ತಾನನ ಎದುರಿನ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪಾಕ್ 160 ರನ್‌ಗಳ ಗುರಿಯನ್ನು ಭಾರತ ತಂಡಕ್ಕೆ ನೀಡಿತ್ತು. ಭಾರತವು ಕೊನೆಯ ಎಸೆತದಲ್ಲಿ ತನ್ನ ಗುರಿ ಮುಟ್ಟಿತು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಶತಕದ ಜೊತೆಯಾಟದ ಇಂದು ಭಾರತ ತಂಡಕ್ಕೆ ಗೆಲುವು ತಂದಿತು. ಕೊನೆಯ 8 ಎಸೆತಗಳಲ್ಲಿ 28 ರನ್ ಗಳಿಸಿದ ಭಾರತ ತಂಡ ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಆ ಒಂದೊಂದು ಎಸೆತವು ಪಂದ್ಯದ ದಿಕ್ಕು ಬದಲಿಸುವಂತಿದ್ದವು.

18 ಓವರ್ ನಲ್ಲಿದ್ದ ಭಾರತ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತ್ತು. ಗೆಲುವಿಗೆ 12 ಎಸೆತಗಳಲ್ಲಿ 31 ಬೇಕಿತ್ತು. ಪಾಕ್ ಬೌಲರ್ ಹ್ಯಾರಿಸ್ ರೌಫ್ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಒಂದು ರನ್ ಗಳಿಸಿದರೆ ಮರು ಎಸೆತದಲ್ಲಿ ಕೊಹ್ಲಿ ಸಹ ಒಂದು ರನ್ ಗಳಿಸಿದರು. ಆದರೆ ಮೂರನೇ ಎಸೆತದಲ್ಲಿ ಹಾರ್ದಿಕ್ ರನ್ ಗಳಿಸದೆ ನಾಲ್ಕನೆ ಎಸೆತದಲ್ಲಿ 1 ರನ್ ಗಳಿಸಿದರು. ಆಗ ಭಾರತ 131 ರನ್ ಗಳಿಸಿತ್ತು. ಗೆಲುವಿಗೆ 8 ಎಸೆತಗಳಲ್ಲಿ 28 ರನ್ ಗಳಿಸಬೇಕಿತ್ತು. ಪಂದ್ಯ ಪಾಕ್‌ ಪರವಾಗಿದ್ದ ಎಲ್ಲರ ನೋಟ, ಆನಂತರ ನಡೆದಿದ್ದು ವೂಹೆಗೂ ನಿಲಕದ ಕೊಹ್ಲಿ ಆಟ ಎಲ್ಲರನ್ನೂ ಮೆಚ್ಚಿಸಿತು.

ಒಟ್ಟಾರೆಯಾಗಿ 53 ಎಸೆತಗಳಲ್ಲಿ 06 ಬೌಂಡರಿ ಮತ್ತು 04 ಸಿಕ್ಸರ್ ಸೇರಿ 82 ರನ್ ಚಚ್ಚಿದ ವಿರಾಟ್ ಕೊಹ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಆಘಾತ ಕಂಡಿತು. ಆನಂತರ ಮಸೂದ್ (52) ಮತ್ತು ಇಫ್ತಿಕಾರ್ ಅಹ್ಮದ್‌ರವರ (51) ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತ್ತು. ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಶದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು.

ಆನಂತರ ಭಾರತ ತಂಡವೂ ಸಹ ಆರಂಭಿಕ ಆಘಾತ ಕಂಡಿತು. 31 ರನ್ ಗಳಿಸುವಷ್ಟರಲ್ಲಿ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಅಕ್ಸರ್ ಪಟೇಲ್ ಔಟ್ ಆಗಿ ಪೆವಿಲಿಯನ್ ಸೇರಿದ್ದರು. ಆನಂತರ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಜೊತೆಯಾಟ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಪಾಕ್ ಪರವಾಗಿ ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ನವಾಜ್ ತಲಾ ಎರಡು ವಿಕೆಟ್ ಪಡೆದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!