Friday, October 18, 2024

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗರ ಮೀಸಲಾತಿ ಹೆಚ್ಚಿಸಲು ಆಗ್ರಹ

ವರದಿ : ನ.ಲಿ.ಕೃಷ್ಣ

ರಾಜ್ಯ ಸರ್ಕಾರವು ಒಕ್ಕಲಿಗರಿಗೆ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ಇಂದು ಮದ್ದೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮದ್ದೂರಿನ ಪ್ರವಾಸಿ ಮಂದಿರದಿಂದ ಪೇಟೆ ಬೀದಿಯ ಮೂಲಕ ಪ್ರತಿಭಟನಾ ಮೆರವಣಿಗೆ  ಹೊರಟ ಪ್ರತಿಭಟನಾಕಾರರು, ನರಸಿಂಹಸ್ವಾಮಿ ದೇವಸ್ಥಾನದವರೆಗೆ ಸಾಗಿದರು. ದೇವಸ್ಥಾನ ಆವರಣದಲ್ಲಿ ಹಲವು ಮುಖಂಡರು ಸೇರಿಕೊಂಡರು.

ಮೀಸಲಾತಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಕ್ಷ ಬೇಧ ಮರೆತು ಸರ್ವಪಕ್ಷದ ಮುಖಂಡರು ಭಾಗವಹಿಸಿದರು. ರಾಜ್ಯದಲ್ಲಿ ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿರ್ಧರಿಸಬೇಕು ಎಂದು
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಒತ್ತಾಯಿಸಿತು.

ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ಕಾರ್ಯದರ್ಶಿ ಸುರೇಶ್ ರಾಜೇಶ್ ತಿಪ್ಪೂರು, ಪ್ರೊ.ಕೃಷ್ಣೇಗೌಡ ರವಿವಳಗೆರೆಹಳ್ಳಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಲ್.ಕೃಷ್ಣ ತಿಪ್ಪೂರು, ಮನು ಗೊರವನಹಳ್ಳಿ, ಸಿದ್ದರಾಜು, ಕಾಂಗ್ರೆಸ್ ಮುಖಂಡರಾದ ಗುರುಚರಣ್, ಕದಲೂರು ರಾಮಕೃಷ್ಣ, ಅಜ್ಜಹಳ್ಳಿ ರಾಮಕೃಷ್ಣ, ಬ್ಲಾಕ್ ಅಧ್ಯಕ್ಷ ನಾಗಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ತಿಮ್ಮೇಗೌಡ, ವಿ.ಸಿ.ಉಮಾಶಂಕರ್ ಭಾಗವಹಿಸಿದ್ದರು.

ಜೆಡಿಎಸ್ ಮುಖಂಡರಾದ ಕೂಳಗೆರೆ ಶೇಖರಣ್ಣ, ರಾಜಣ್ಣ ಗೊರವನಹಳ್ಳಿ, ಪ್ರಸನ್ನ, ಬಿಜೆಪಿ ಮುಖಂಡರಾದ ಗೆಜ್ಜಲಗೆರೆ ಮಹೇಂದ್ರ, ಗ್ರಾ.ಪಂ.ಸದಸ್ಯರ ಒಕ್ಕೂಟದ ಅಧ್ಯಕ್ಷ ಜಿ.ಎನ್.ಸತ್ಯ, ರೈತ ಮುಖಂಡರಾದ ಸೊ.ಶಿ. ಪ್ರಕಾಶ್ ಕುದರಗುಂಡಿ, ನಾಗರಾಜ್ ಹುಲಿಗೆರೆ ಪುರ, ರವಿ, ವಿ.ಕೆ.ಜಗದೀಶ್, ವಳಗೆರೆಹಳ್ಳಿ ಬಿ.ವಿ.ಶಂಕರೇಗೌಡ, ಮಮತ ಶಂಕರೇಗೌಡ, ಪ್ರಿಯಾಂಕ, ಅಪ್ಪು, ಶಿಂಷಾ ಬ್ಯಾಂಕ್ ಅಧ್ಯಕ್ಷ ತಗ್ಗಹಳ್ಳಿ ಚಂದ್ರು, ನಿರ್ದೆಶಕ ಸತೀಶ್ ಉಪ್ಪಿನಕೆರೆ ಶಿವರಾಮೇಗೌಡ, ಚಂದುಪೂರ ಶಿವಲಿಂಗೇಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!