Friday, November 20, 2026

ಪ್ರಾಯೋಗಿಕ ಆವೃತ್ತಿ

ಮನುಷ್ಯ ಮತ್ತೊಬ್ಬರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು|ಸಿದ್ದರಾಮಯ್ಯ

ಮನುಷ್ಯ ಮತ್ತೊಬ್ಬರನ್ನು ದ್ವೇಷಿಸುವ ಗುಣ ಬೆಳೆಸಿಕೊಳ್ಳಬಾರದು ಬದಲಿಗೆ ಎಲ್ಲರನ್ನೂ ಪ್ರೀತಿಸುವ ಗುಣ ಕಂಡುಕೊಳ್ಳಬೇಕು ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು.

ಮಂಡ್ಯ ತಾಲೂಕಿನ ಬಸರಾಳು ಸಮೀಪದ ತಿರುಮಲಾಪುರದಲ್ಲಿ ಹುಲಿಯೂರಮ್ಮ ದೇವಸ್ಥಾನ ಉದ್ಘಾಟನೆ ಮಾಡಿ ಮಾತನಾಡಿದ ಸಿದ್ದರಾಮಯ್ಯರವರು, ದೇವರು ಜನರೆಲ್ಲರಿಗೂ ಆರೋಗ್ಯ ಆಯಸ್ಸು ಎಲ್ಲವನ್ನು ನೀಡಲಿ, ದೇವರು ಬರಿ ದೇವಸ್ಥಾನದಲ್ಲಿ ಮಾತ್ರ ಇರುವುದಿಲ್ಲ ಎಲ್ಲರಲ್ಲಿಯೂ ಇರುತ್ತಾನೆ. ಹಾಗಾಗಿಯೇ ದೇವರನ್ನು ಸತ್ಯ ಎನ್ನಲಾಗುತ್ತದೆ. ಮನುಷ್ಯ ಸತ್ಯ ಮಾತನಾಡುವುದನ್ನು ರೂಡಿಸಿಕೊಳ್ಳಬೇಕು. ಸತ್ಯ ಸ್ವರ್ಗವಿದ್ದಂತೆ ಸುಳ್ಳು ನರಕವಿದ್ದಂತೆ. ಹಾಗಾಗಿ ನರಕ ಸ್ವರ್ಗ ಎರಡೂ  ಭೂಮಿಯ ಮೇಲೆ ಇದೆ ಎಂದರು.

ಜಾತಿ ಧರ್ಮದ ಆಧಾರದ ಮೇಲೆ ಗೋಡೆಗಳನ್ನು ಕಟ್ಟಿಕೊಳ್ಳಬಾರದು ಬದಲಿಗೆ ಕನಕದಾಸರ ಮಾತಿನಂತೆ ನಡೆಯಬೇಕು. ಕುಲ ಕುಲ ಕುಲ ವೆಂದು ಬಡಿದಾಡದಿರಿ ಎನ್ನುವಂತೆ ಬದುಕಬೇಕು ಎಂದರು.

ಹಲವು ಯೋಜನೆಗಳನ್ನು ಕೈಬಿಟ್ಟಿದ್ದಾರೆ

ನಾನು ನೀಡಿದಂತಹ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ. 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನಾನು ಜಾತಿ ಮತ್ತು ಧರ್ಮವನ್ನು ನೋಡದೆ ಎಲ್ಲಾ ಬಡವರಿಗೆ ಸಮನಾದ ಸೌಕರ್ಯಗಳನ್ನು ಒದಗಿಸಿ ಕೊಟ್ಟಿದ್ದೇನೆ. ಶಾಲಾ ಮಕ್ಕಳಿಗೆ ವಿದ್ಯಾಸಿರಿಯ ಮೂಲಕ ಹಣ ಬಿಡುಗಡೆ ಮಾಡಿ ಕೊಟ್ಟಿದ್ದೇನೆ. ಹಿಂದುಳಿದ ವರ್ಗದವರಿಗೆ ಹೆಚ್ಚುವರಿ ವಿದ್ಯಾರ್ಥಿ ವೇತನಗಳನ್ನೂ ಕೊಟ್ಟಿದ್ದೇನೆ. ಆದರೆ ಇಂದು ಈ ಬೊಮ್ಮಾಯಿ ಸರ್ಕಾರ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಿದ್ದಾರೆ, ಜೊತೆಗೆ ವಿದ್ಯಾಸಿರಿ ಯೋಜನೆಯನ್ನೂ ಕೈಬಿಟ್ಟಿದ್ದಾರೆ ಎಂದರು.

ಕೃಷಿ ಭಾಗ್ಯ ಸ್ಥಗಿತ
ಇಡೀ ರಾಜ್ಯದಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕೃಷಿ ಹೊಂಡ ಕಾರ್ಯಕ್ರಮ ತಂದಿದ್ದೆ. ಹಾಗೂ ಈ ಕಾರ್ಯಕ್ರಮದಡಿ ಅನೇಕ ಆರ್ಥಿಕ ನೆರವು ನೀಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೆ . ಆದರೆ ಈ ಬಿಜೆಪಿ ಸರ್ಕಾರ ಇದನ್ನೂ ಸ್ಥಗಿತಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ
ಎಲ್ಲಾ ಜಾತಿಯವರು ಮೀಸಲಾತಿ ಕೇಳುತ್ತಿದ್ದಾರೆ. ಕೇಳಲಿ, ಆದರೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ವಂಚಿತರಾದವರಿಗೆ ಮೀಸಲಾತಿ ಕೊಡಲಿ ಸಂವಿಧಾನದ ಆರ್ಟಿಕಲ್ 15 16 ಪ್ರಕಾರ ಕೊಟ್ಟರೆ ತಪ್ಪೇನಿದೆ ಎಂದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಭಯ ಬಂದಿದೆಯಂತೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿರುವ ಮಾತನ್ನು ಮಾಧ್ಯಮದವರು ಕೇಳಿದಾಗ ಆತ ಒಬ್ಬ ಜೋಕರ್ ಆತನಿಗೆ ನಾನು ಉತ್ತರಿಸುವುದು ಅನವಶ್ಯಕ ಎಂದು ಉತ್ತರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ