ಸೋತು ಸುಣ್ಣವಾಗಿದ್ದ ಎಲ್.ಆರ್.ಶಿವರಾಮೇಗೌಡ್ರನ್ನ ಜೆಡಿಎಸ್ ಪಕ್ಷ ಎಂಪಿ ಮಾಡಿದೆ ಎಂದು ಮಂಡ್ಯ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ತಿರುಗೇಟು ನೀಡಿದರು.
ಮಂಡ್ಯ ತಾಲ್ಲೂಕಿನ ಬೂದನೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಶಿವರಾಮೇಗೌಡರು ಮಂಡ್ಯ ಜೆಡಿಎಸ್ ಭದ್ರಕೋಟೆ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆಯಲ್ಲ, ಜೊತೆಗೆ ಏಳು ಸುತ್ತಿನ ಕೋಟೆ ಎಂದರು.
ಶಿವರಾಮೇಗೌಡ್ರೇ ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ಜೆಡಿಎಸ್ ಪಕ್ಷ ಎಂಬುದು ನೆನಪಿರಲಿ. ನೀವು ಈ ಹಿಂದೆ ಯಾವ ಪಕ್ಷದಿಂದ ಸಂಸದರಾಗಿದ್ದರು ಅನ್ನೋದನ್ನ ತಿಳಿದುಕೊಂಡು ಮಾತನಾಡ ಬೇಕು. ಪಕ್ಷದ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಲು ರಣೋತ್ಸಾಹದಿಂದ ಸಿದ್ಧವಾಗಿ ನಿಂತಿದ್ದಾರೆ.ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ 2023 ಕ್ಕೆ ಕುಮಾರಣ್ಣನವರು ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕುಮಾರಣ್ಣನವರ ಮಿಷನ್ 123 ಯಶಸ್ವಿಯಾಗುವುದು ಖಂಡಿತ. ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಇದನ್ನು ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದರು.




