ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2022- 23 ನೇ ಸಾಲಿನಲ್ಲಿ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರಿಗೆ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಸೌರಶಕ್ತಿ ಪ್ಯಾನೆಲ್ ಅಳವಡಿಕೆ ಮತ್ತು ರಿಪೇರಿ, ಜೆಸಿಬಿ, ಟ್ಯಾಕ್ಟರ್, ರೋಡ್ ರೋಲರ್, ಅರ್ಥ್ ಮೂವರ್ಸ್ ಚಾಲನಾ ತರಬೇತಿ, ಎಸಿ, ಕಂಪ್ಯೂಟರ್ ಮತ್ತು ಮೊಬೈಲ್ ರಿಪೇರಿ ತರಬೇತಿ, ಅಕೌಂಟ್ ಅಂಡ್ ಟ್ಯಾಲಿ ತರಬೇತಿ, ಕ್ಯಾಡ್ ಕ್ಯಾಡ್ + ಜಾವ ಪೈಥಾನ್ ಬಗ್ಗೆ ತರಬೇತಿ, ವೆಬ್ ಡಿಸೈನಿಂಗ್ ತರಬೇತಿ, 2ಡಿ ಆನಿಮೇಷನ್ 3ಡಿ ಆನಿಮೇಷನ್ ಬಗ್ಗೆ ತರಬೇತಿ, ಟೆಲಿಜೇರ್ನಲಿಸಂ ಕುರಿತು ತರಬೇತಿಗಳನ್ನು ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು ನವೆಂಬರ್ 30 ರೊಳಗಾಗಿ ವೆಬ್ ಸೈಟ್ https://Sevasindu Grama one ನಲ್ಲಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯ ದೂ.ಸಂ:08232 221157 ಸಂಪರ್ಕಿಸಬಹುದೆಂದು ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಕಟಣೆ ತಿಳಿಸಿದ್ದಾರೆ.




