Tuesday, November 24, 2026

ಪ್ರಾಯೋಗಿಕ ಆವೃತ್ತಿ

ಅಂದಿನ ಬಾಲನಟಿಯೇ ಮಂಡ್ಯದ ಇಂದಿನ ಎಸಿ ಎಚ್‌.ಎಸ್.ಕೀರ್ತನಾ

ಮಂಡ್ಯ ಉಪವಿಭಾಗಾಧಿಕಾರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಎಚ್.ಎಸ್. ಕೀರ್ತನಾ ಅವರು ಐಎಎಸ್ ಅಧಿಕಾರಿಯಷ್ಟೇ ಅಲ್ಲ, ಅವರು ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳು, ಹಲವಾರು ಸೀರಿಯಲ್ ಗಳಲ್ಲೂ ನಟನೆ ಮಾಡಿದ್ದಾರೆ.

ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಬಾಲ ನಟಿಯಾಗಿ ಪಾದಾರ್ಪಣೆ ಮಾಡಿದ ಎಚ್.ಎಸ್. ಕೀರ್ತನಾ ಅವರು ಕರ್ಪೂರದ ಗೊಂಬೆ, ಗಂಗ- ಯಮುನಾ, ಮುದ್ದಿನ ಅಳಿಯ, ಉಪೇಂದ್ರ, ಎ, ಕಾನೂನು ಹೆಗ್ಗಡತಿ, ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ,ಲೇಡಿ ಕಮೀಷನರ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಬಾಲ ಪುರಸ್ಕಾರವು ದೊರೆತಿದೆ.

ಶಿವರಾಜ್ ಕುಮಾರ್ ಜೊತೆಗೆ ಬಾಲ ನಟಿಯಾಗಿ ಕೀರ್ತನಾರವರು.

ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶಿವರಾಜ್ ಕುಮಾರ್, ರಮೇಶ್, ಶಶಿಕುಮಾರ್, ದೇವರಾಜ್, ಮಾಲಾಶ್ರೀ, ಶಿಲ್ಪಾ, ಶೃತಿ, ಶ್ವೇತ, ಸಿತಾರಾ ಮೊದಲಾದವರೊಂದಿಗೆ ಬಾಲ ನಟಿಯಾಗಿ ಕನ್ನಡ ಚಲನಚಿತ್ರರಂಗದಲ್ಲಿ ನಟಿಸಿದ್ದ ಎಚ್.ಎಸ್. ಕೀರ್ತನಾ ನಂತರ ಓದಿನತ್ತ ಗಮನ ಹರಿಸಿ 2011ರಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದು ಕೆಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಯುಪಿಎಸ್ಸಿ ಪರೀಕ್ಷೆ ಬರೆದು 6ನೇ ಪ್ರಯತ್ನದಲ್ಲಿ 167ನೇ ರ‌್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾದರು.

ರಮೇಶ್ ಅರವಿಂದ್ ರ ಜೊತೆಗೂ ನಟಿಸಿದ್ದ ಕೀರ್ತನಾ ರವರು.

2020ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಎಚ್.ಎಸ್.ಕೀರ್ತನಾ ಅವರು ಬಹಳ ಶ್ರಮ ಪಟ್ಟು ಓದಿ ತಂದೆ, ತಾಯಿಯ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಇಂದು ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಪೂರ್ಣ ಪ್ರಮಾಣದ ಐಎಎಸ್ ಅಧಿಕಾರಿಯಾಗಿ ಮಂಡ್ಯ ಉಪವಿಭಾಗಾಧಿಕಾರಿಯಾಗಿ ಕರ್ತವ್ಯಕ್ಕೆ ನೇಮಕವಾಗಿರುವ ಎಚ್.ಎಸ್.ಕೀರ್ತನಾ ಅವರಿಂದ ಮಂಡ್ಯ ಜಿಲ್ಲೆಯ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ