Friday, November 20, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿ ಸಂಘಟನೆಯಿಂದ ಒಂದು ಲಕ್ಷ ಸಸಿ ನೆಡುವ ಗುರಿ

ವೀರಶೈವ ಲಿಂಗಾಯಿತ ವಿದ್ಯಾರ್ಥಿ ಯುವ ಮೋರ್ಚಾ ಘಟಕದ ವತಿಯಿಂದ ರಾಜ್ಯಾಧ್ಯಕ್ಷ ಬಿ.ಟಿ.ಜೀವನ್ ನೇತೃತ್ವದಲ್ಲಿ ರಾಜ್ಯಾದ್ಯಂತ ಒಂದು ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಇಂದು ಮಂಡ್ಯ ನಗರದಲ್ಲಿ ಚಾಲನೆ ನೀಡಲಾಯಿತು.

ಮಂಡ್ಯ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಉದ್ಯಾನವನದಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಘೋಷ ವಾಕ್ಯದಡಿ ನಗರಸಭಾ ಅಧ್ಯಕ್ಷ ಎಚ್ ಎಸ್‌.ಮಂಜುನಾಥ್, ಹತ್ತಾರು ಜಾತಿಯ ಸಸಿಗಳನ್ನು ನೆಡುವ ಮುಖಾಂತರ ಉದ್ಘಾಟಿಸಿದರು.

ಬಿ.ಟಿ.ಜೀವನ್ ಮಾತನಾಡಿ, ಮರಗಳನ್ನು ಬೆಳೆಸುವುದು ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಗರ ಪ್ರದೇಶಗಳಲ್ಲಿ, ಪಾರ್ಕ್ ಗಳಲ್ಲಿ ಮರಗಳನ್ನು ಬೆಳೆಸುವುದರಿಂದ, ಶುದ್ಧವಾದ ಗಾಳಿ ಸಿಗುವ ಮೂಲಕ ಆರೋಗ್ಯ ವೃದ್ಧಿಸುತ್ತದೆ.

ಸರ್ಕಾರ ಹಾಗೂ ನಗರಸಭೆ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬೇಕು.ಈ ನಿಟ್ಟಿನಲ್ಲಿ ಸ್ಥಳೀಯ, ನಗರ ಸಭೆ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡ ಪ್ರಕಾಶ್, ತ್ರಿಭುವನ್, ಲಿಂಗಾಯಿತ ಮಹಾಸಭಾಜಿಲ್ಲಾ ಉಪಾಧ್ಯಕ್ಷ ಎಂ. ಎಸ್. ಮಂಜುನಾಥ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಚೇತನ್ ಕುಮಾರ್, ಉಪಾಧ್ಯಕ್ಷ ಚಂದ್ರು, ಕಾರ್ಯದರ್ಶಿ ಶಿವಪ್ರಸಾದ್, ರೋಹಿತ್ ಕುಮಾರ್, ಕೀರ್ತಿ ಪ್ರಸಾದ್, ಮದ್ದೂರು,ಕನ್ನಡ ಸೇನೆ ಅಧ್ಯಕ್ಷ ನಂದೀಶ್,ನಾಗೇಶ್, ಅಭಿನಂದನಾ ಪಾಟೀಲ್ ಇನ್ನು ಅನೇಕರು ಭಾಗವಹಿಸಿದfdರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ