ಬಿಜೆಪಿ ಮಳವಳ್ಳಿ ತಾಲ್ಲೂಕು ಘಟಕ ನೂತನ ಕಚೇರಿಯನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷ ಸಂಘಟನೆಗಾಗಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣ ದ ಮೈಸೂರು ಮುಖ್ಯರಸ್ತೆಯಲ್ಲಿ ಕಚೇರಿಯನ್ನು ಆರಂಭಿಸಲಾಗಿದೆ ಎಂದರು.
ತಾಲ್ಲೂಕು ಮಂಡಲ ಅಧ್ಯಕ್ಷ ಕೃಷ್ಣ ಮಾತಮಾಡಿ, ಬಿಜೆಪಿ ಪಕ್ಷವು ತನ್ನದೇ ಆದ ಶಿಸ್ತು ಬದ್ದ ಪಕ್ಷವಾಗಿದ್ದು, ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಕಚೇರಿ ಆರಂಭಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆವಿಗೂ ತೆರೆದಿದ್ದು ಕಾರ್ಯಕರ್ತರು ಬಳಸಿಕೊಳ್ಳಬಹುದಾಗಿದೆ. ಬಿಜೆಪಿ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಕಟ್ಟಿ ಮುಂದಿನ ವಿಧಾನಸಭಾ ಸುನಾವಣೆಯಲ್ಲಿ ಗೆಲುವು ಸಾಧಿಸಲು ಆಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಹಲವು ಯುವಕರು ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಮುಖಂಡರಾದ ಅಪ್ಪಾಜಿಗೌಡ, ಕುಮಾರಸ್ವಾಮಿ, ಯಮದೂರು ಸಿದ್ದರಾಜು, ಅಶೋಕ್ ಕುಮಾರ್, ಚಿಕ್ಕಣ್ಣ, ದೇವರಾಜು, ರಾಜೀವ್, ಮೋಹನ್ ಕುಮಾರ್, ರಾಜಣ್ಣ, ಸಿದ್ದಲಿಂಗಸ್ವಾಮಿ ಕೆ.ಸಿ ನಾಗೇಗೌಡ, ಶಿವಲಿಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.




