Wednesday, October 23, 2024

ಪ್ರಾಯೋಗಿಕ ಆವೃತ್ತಿ

ವಿಜೃಂಭಣೆಯಿಂದ ನಡೆದ ಶ್ರೀ ಮಂಟೇಸ್ವಾಮಿ ಸಿದ್ದಪ್ಪಾಜಿ ಉತ್ಸವ

ಮದ್ದೂರು ತಾಲ್ಲೂಕಿನ ಭಾರತಿನಗರ ಸಮೀಪದ ಬಿದರಹೊಸಹಳ್ಳಿಯಲ್ಲಿ 5 ವರ್ಷಕೊಮ್ಮೆ ನಡೆಯುವ ಆದಿಹೊನ್ನಾಯಕನಹಳ್ಳಿ ಮಠದ ಶ್ರೀ ಮಂಟೇಸ್ವಾಮಿ ಸಿದ್ದಾಪ್ಪಾಜಿಯವರ ಉತ್ಸವ ಮತ್ತು ಪಂಕ್ತಿ ಸೇವೆ ವಿಜೃಂಭಣೆಯಿಂದ ನಡೆಯಿತು.

ಐದು ವರ್ಷಕ್ಕೊಮ್ಮೆ ನಡೆಯುವ ಮಂಟೇಸ್ವಾಮಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಸಿದ್ದಪ್ಪಾಜಿ ಮಂಟೇಸ್ವಾಮಿ ದೇವರಿಗೆ ಹರಕೆ ಹೊತ್ತಿದ್ದ ಭಕ್ತರು ಸುಮಾರು 700ಕ್ಕೂ ಹೆಚ್ಚು ಕುರಿಗಳನ್ನು ಅರ್ಪಿಸಿದರು. ಸುತ್ತಮುತ್ತಲಿನ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಪಂಕ್ತಿ ಸೇವೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಮಂಟೇಸ್ವಾಮಿ ಬಸಪ್ಪ ಮತ್ತು ಶ್ರೀ ಸಿದ್ದಪ್ಪಾಜಿಯವರ ವಿಶೇಷ ಉತ್ಸವದಲ್ಲೂ ಸಹಸ್ರಾರು ಜನರು ಪಾಲ್ಗೊಂಡರು. ಆದಿ ಹೊನ್ನಾಯಕನಹಳ್ಳಿ ಪೀಠದ ಅದ್ಯಕ್ಷರಾದ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಪಾಲ್ಗೊಂಡಿದ್ದರು.

ರಾತ್ರಿ 8ಗಂಟೆಗೆ ಶ್ರೀ ಮಂಟೇಸ್ವಾಮಿ ಬಸಪ್ಪ ದೇವರ ಮೆರವಣಿಗೆ ಉತ್ಸವ ಹಾಗೂ ಮಹಾಮಂಗಳಾರಾತಿ ಕಾರ್ಯಕ್ರಮಗಳು ಜರುಗಿದವು.

ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ಲಕ್ಷ್ಮೀನಾರಾಯಣ, ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್,ಸಬ್ಇನ್ಸ್ ಪೆಕ್ಟರ್ ಮಹದೇವಯ್ಯ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!