Monday, November 23, 2026

ಪ್ರಾಯೋಗಿಕ ಆವೃತ್ತಿ

ವಳಗೆರೆಹಳ್ಳಿ ಗ್ರಾ.ಪಂ : ನೂತನ ಉಪಾಧ್ಯಕ್ಷರಾಗಿ ದಯಾನಂದ ಆಯ್ಕೆ

ವರದಿ : ಪ್ರಭು ವಿ.ಎಸ್.

ಮದ್ದೂರು ತಾಲೂಕಿನ ವಳಗೆರಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಎಸ್.ದಯಾನಂದ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಉಪಾಧ್ಯಕ್ಷರಾಗಿದ್ದ ಎಸ್.ಕೆ.ಗಿರೀಶ್ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ದಯಾನಂದ ಅವರು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ರೇಖಾ ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು .

ನೂತನ ಉಪಾಧ್ಯಕ್ಷ ದಯಾನಂದ ಅವರು ಮಾತನಾಡಿ ತಮ್ಮನ್ನು ಉಪಾಧ್ಯಕ್ಷರಾಗಿ ಆಯ್ಕೆಗೊಳಿಸಿದ ಸದಸ್ಯರಿಗೆ ಮತ್ತು ಸ್ಥಳೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಜೊತೆಗೆ ಆಡಳಿತ ಮಂಡಳಿಯೊಂದಿಗೆ ಕೈ ಜೋಡಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಸರ್ಕಾರದ ಅನುದಾನ ಸದ್ಬಳಕೆಗೆ ಅಧ್ಯಕ್ಷರೊಂದಿಗೆ ಸೇರಿ ಶಕ್ತಿಮೀರಿ ಶ್ರಮಿಸುವುದಾಗಿ ಹೇಳಿದರು.

ನೂತನ ಉಪಾಧ್ಯಕ್ಷ ದಯಾನಂದ್ ಅವರನ್ನು ಗ್ರಾ.ಪಂ. ಅಧ್ಯಕ್ಷರಾದ ಶಶಿಕಲಾ ಉಮಾ ಶಂಕರ್ ,ಸದಸ್ಯರಾದ ನಿಂಗಮಣಿ,ಶಿವಲಿಂಗಯ್ಯ, ಉಮೇಶ್,ಸುನಿಲ್, ಮಮತಾ,ವಸಂತ, ಶೋಭಾ,ವಿ.ಜೆ.ಸುನಿಲ್, ಶಿವಕುಮಾರಿ, ಮೀನಾಕ್ಷಿ, ಮುಖಂಡರಾದ ಗುಂಡ ಮಹೇಶ್,ಯತೀಶ್,ವಿ.ಕೆ. ಗಿರೀಶ್, ಯೋಗಾನಂದ,ಪುಟ್ಟಸ್ವಾಮಿ,ವೆಂಕಟೇಶ್ ಕುಮಾರ್, ಉಮಾಶಂಕರ್ ಸೇರಿದಂತೆ ಹಲವರು ಅಭಿನಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ