ಆಹಾರವಿಲ್ಲದೆ ಒಂದಷ್ಟು ದಿನ ಬದುಕಬಹುದು. ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಜೀವ ಜಲವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ನಗರಸಭಾಧ್ಯಕ್ಷ ಎಚ್.ಎಸ್. ಮಂಜು ತಿಳಿಸಿದರು.
ಮಂಡ್ಯ ನಗರದ 2ನೇ ವಾರ್ಡ್‌ನ ಶ್ರೀನಿವಾಸಸ್ವಾಮಿ ದೇವಸ್ಥಾನದ ಬಳಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ದಿನೇ ದಿನೇ ಪರಿಸರ ನಾಶ, ಮಾಲಿನ್ಯ ಹೆಚ್ಚಾಗಿ ಅಂತರ್ಜಲ ಕ್ಷೀಣಿಸುತ್ತಿದೆ.
ಆದ್ದರಿಂದ ಅಂತರ್ಜಲ ವೃದ್ಧಿಗೆ ಎಲ್ಲರೂ ಕ್ರಮ ವಹಿಸಬೇಕು. ಮಳೆನೀರು ಕೊಯ್ಲು ಮಾಡುವ ಮೂಲಕ ನೀರಿನ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗಿದ್ದು, ಇದನ್ನು ನಗರದ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭಾ ಆಯುಕ್ತ ಎಸ್. ಲೋಕೇಶ್, ಸದಸ್ಯರಾದ ಪೂರ್ಣಿಮಾ, ಮಂಜುಳಾ, ಎಇಇ ರವಿಕುಮಾರ್, ಆರೋಗ್ಯ ನಿರೀಕ್ಷಕ ಚಲುವರಾಜು, ಮುಖಂಡರಾದ ಸುದರ್ಶನ್, ಪ್ರಕಾಶ್, ವಸಂತ್ ಇತರರಿದ್ದರು.