ನಾವ್ಯಾರೂ ಇಂತದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕೆ.ಆರ್.ಪೇಟೆಯಲ್ಲಿ ನಡೆದು ಕನಕ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಕುರುಬರ ಜಾತಿಯಲ್ಲಿ ಅರ್ಜಿ ಹಾಕೊಂಡು ಜನಿಸಿಲ್ಲ. ನಮ್ಮ ತಂದೆ ತಾಯಿ ಕುರುಬರಾಗಿದ್ರು. ಅದಕ್ಕೆ ಕುರುಬ ಜಾತಿಯಲ್ಲಿ ಹುಟ್ಟಿದೆ. ಅದೇ ರೀತಿ ಚಲುವರಾಯಸ್ವಾಮಿ ತಂದೆ ತಾಯಿ ಒಕ್ಕಲಿಗರಾಗಿದ್ರಿಂದ ಒಕ್ಕಲಿಗ ಜಾತಿಯಲ್ಲಿ ಹುಟ್ಟಿದ್ದಾರೆ. ನರೇಂದ್ರಸ್ವಾಮಿ ತಂದೆ ತಾಯಿ ದಲಿತರಾಗಿದ್ರಿಂದ ಅವರು ದಲಿತರಾಗಿದ್ದಾರೆ. ನಾವ್ಯಾರೂ ಅರ್ಜಿ ಹಾಕೊಂಡು ಆಯಾ ಜಾತಿಯಲ್ಲಿ ಹುಟ್ಟಿಲ್ಲ ಎಂದರು.
ಕನಕನ ಕಿಂಡಿಯ ಬಗ್ಗೆ ಸಭೆಯಲ್ಲಿದ್ದವರಿಗೆ ವಿವರಿಸಿದ ಅವರು, ಕನಕದಾಸರು ದೇವರನ್ನ ನೋಡಲು ಹೋದಾಗ ಅಲ್ಲಿನ ಪುರೋಹಿತರು ನೀನು ಶೂದ್ರ ನಿನ್ನನ್ನ ದೇವಸ್ಥಾನದ ಒಳಗೆ ಬಿಡಲಾಗಲ್ಲ ಎಂದರು. ಸಾಕ್ಷಾತ್ ಕೃಷ್ಣರೇ ತಿರುಗಿ ಕನಕರಿಗೆ ದರ್ಶನ ನೀಡಿದ್ರು ಅನ್ನೋದು ವಾಡಿಕೆ. ಹಾಗಾಗಿ ಆ ಕಿಂಡಿಗೆ ಕನಕನ ಕಿಂಡಿ ಎಂಬ ಹೆಸರು ಬಂದಿದೆ ಎಂದು ವಿವರಿಸಿದರು.




