ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕುವೆಂಪು ವೈಚಾರಿಕ ಚಿಂತನೆಗಳ ಅಭಿಯಾನ ಹಾಗೂ ಕೈಪಿಡಿ ಬಿಡುಗಡೆ ಸಮಾರಂಭವು ಮಾ.17ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ಕರ್ನಾಟಕ ಸಂಘದ ಶಂಕರಗೌಡ ಸಮಾಂಗಣದಲ್ಲಿ ನಡೆಯಲಿದೆ.
ನಾಡಿನ ಹಿರಿಯ ಚಿಂತಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಯಾನವನ್ನು ಉದ್ಘಾಟಿಸಲಿದ್ದು, ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್ ಮತ್ತು ಸೇನಾನಿ ಅವರ ಕುವೆಂಪು ವೈಚಾರಿಕ ಚಿಂತನೆಯ ಕೈಪಿಡಿಯನ್ನು ಬಿಡುಗಡೆ ಮಾಡಲಿದ್ದಾರೆ. ಅಂಕಣಕಾರ ಬಿ.ಚಂದ್ರೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸುವರು.




