Thursday, September 19, 2024

ಪ್ರಾಯೋಗಿಕ ಆವೃತ್ತಿ

ರಿಯಲ್ ಸ್ಟಾರ್ ನ ʻಕಬ್ಜʼ ಟೀಸರ್ ನಾಳೆ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷಿತ ʼಕಬ್ಜʼ ಸಿನಿಮಾ ಹಿಂದಿ ಅವತರಣಿಕೆಯ ಟೀಸರ್‌ ಡಿಸೆಂಬರ್ 1ರಂದು ಬಿಡುಗಡೆಯಾಗಲಿದೆ. ಇಂದು ಟೀಸರ್‌ನ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿರುವ ಚಿತ್ರದ ನಿರ್ದೇಶಕ ಆರ್‌ ಚಂದ್ರು, “ಹಿಂದಿಯವರಿಗೂ ನಮ್ಮ ‘ಅಂಡರ್ ವರ್ಲ್ಡ್’ ತೋರಿಸುವ ಸಮಯ ಬಂದಿದೆ” ಎಂದು ಬರೆದುಕೊಂಡಿದ್ದಾರೆ.

ಉಪೇಂದ್ರ ಹುಟ್ಟು ಹಬ್ಬದ ಅಂಗವಾಗಿ ಕಳೆದ ಸೆಪ್ಟೆಂಬರ್ 17ರಂದು ಕಬ್ಜ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿತ್ತು. ಎರಡು ನಿಮಿಷಗಳ ಟೀಸರ್‌ನಲ್ಲಿ ಆರ್‌ ಚಂದ್ರು, ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ ಮಾಫಿಯಾದ ಕಥನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು. ತಾಯಿ ಸೆಂಟಿಮೆಂಟ್‌ ಜೊತೆಗೆ ಪ್ರಾರಂಭಗೊಳ್ಳುವ ಟೀಸರ್‌ ಕಥಾನಾಯಕ ಮಾಫಿಯಾ ಡಾನ್‌ ಆಗಿ ಬೆಳೆಯುವ ರಕ್ತಸಿಕ್ತ ಹಾದಿಯನ್ನು ಪರಿಚಯಿಸಿತ್ತು.

“>

ಕಬ್ಜ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿದ್ಧಗೊಂಡಿದೆ. ಚಿತ್ರದ ಮೊದಲ ಟೀಸರ್‌ಗೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ವಿಶೇಷವಾಗಿ ಹಿಂದಿ ಭಾಷಿಕರು ಕಬ್ಜ ಚಿತ್ರ ಕೆಜಿಎಫ್‌ ಮಾದರಿಯ ಸಿನಿಮಾ ಎಂದು ಹಾಡಿ ಹೊಗಳಿದ್ದರು. ಈ ಹಿನ್ನೆಲೆ ಹಿಂದಿ ನೆಲದಲ್ಲಿ ಚಿತ್ರದ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಚಿತ್ರತಂಡ ಡಿಸೆಂಬರ್‌ 1ರಂದು ವಿಶೇಷ ಹಿಂದಿ ಟೀಸರ್‌ ಬಿಡುಗಡೆ ಮಾಡುತ್ತಿದೆ.
ಉಪೇಂದ್ರ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಸುದೀಪ್‌ ದಕ್ಷ ಪೊಲೀಸ್‌ ಅಧಿಕಾರಿಯಾಗಿ ಮಿಂಚಿದ್ದಾರೆ. ಬಹುಭಾಷಾ ನಟಿ ಶ್ರಿಯಾ ಶರಣ್‌, ಉಪೇಂದ್ರ ಅವರಿಗೆ ಜೊತೆಯಾಗಿದ್ದಾರೆ. ಕೆಜಿಎಫ್‌ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!